ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರಿಷಿಯಸ್ ಪ್ರಧಾನಿ, ಪ್ರಣವ್ ಮುಖರ್ಜಿ ಭೇಟಿ
ಮಾರಿಷಿಯಸ್ ಪ್ರಧಾನಮಂತ್ರಿ ನವೀನಚಂದ್ರ ರಾಮಗೂಲಾಂ ಅವರು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರನ್ನು ಸೋಮವಾರ ಭೇಟಿ ಮಾಡಿದರು. ಐದು ದಿನಗಳ ಭೇಟಿ ಸಲುವಾಗಿ ಭಾರತಕ್ಕೆ ಆಗಮಿಸಿರುವ ರಾಮಗೂಲಾಂ ಇಲ್ಲಿ ಮಂಗಳವಾರ ಆರಂಭವಾದ 6ನೇ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿದ್ದಾರೆ.

ಮಾರಿಷಿಯಸ್ ಜನಸಂಖ್ಯೆಯಲ್ಲಿ ಶೇ.70ರಷ್ಟು ಭಾರತದಿಂದ ವಲಸೆ ಬಂದವರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಗೌರವಾರ್ಥ ಆಫ್ರಿಕಾದ ಆಗ್ನೇಯ ತೀರದ ದ್ವೀಪವು ಮಾ.12ರಂದು ತನ್ನ ರಾಷ್ಟ್ರೀಯ ದಿನವನ್ನು ಆಚರಿಸುತ್ತಿದೆ. ಮೂರು ದಿನಗಳ ಸಾಗರೋತ್ತರ ಭಾರತೀಯರ ಸಮಾವೇಶದಲ್ಲಿ ತಮ್ಮ ಮಾತೃಭೂಮಿಗೆ ಯಾವ ಪ್ರಮಾಣದಲ್ಲಿ ಕೊಡುಗೆ ಸಲ್ಲಿಸಬಹುದೆಂಬುದಕ್ಕೆ ಗಮನಹರಿಸಲಾಗುವುದು.

ಭಾರತದ ಬೆಳೆಯುತ್ತಿರುವ ಆರ್ಥಿಕತೆ ಅನೇಕ ಮಂದಿ ಭಾರತೀಯ ವಲಸಿಗರನ್ನು ಆಕರ್ಷಿಸಿದ್ದು, ರಾಷ್ಟ್ರದಲ್ಲಿ ಉದ್ಯಮ ವಿಸ್ತರಣೆ ಉದ್ದೇಶದಿಂದ ಇಲ್ಲಿಗೆ ಆಗಮಿಸಿದ್ದಾರೆ. ಉದ್ಯಮ ದೃಷ್ಟಿಯಿಂದ ನಮಗೆಲ್ಲರಿಗೂ ಭಾರತದಲ್ಲಿ ಉದ್ಯಮ ಪ್ರಾರಂಭಿಸುವ ಆಸಕ್ತಿಯಿದೆ.

ಆದರೆ ಸೂಕ್ತ ಸಹಯೋಗ ಮತ್ತು ಸೂಕ್ತ ಉದ್ಯಮಕ್ಕಾಗಿ ನಾವು ಹುಡುಕಬೇಕಾಗಿದೆ ಎಂದು ದಕ್ಷಿಣ ಆಫ್ರಿಕಾದ ಉದ್ಯಮಿ ಉದಯ್ ಜಾನ್ ತಿಳಿಸಿದರು. ಭಾರತದ ಆರ್ಥಿಕತೆ ವೇಗವಾಗಿ ಶೇ. 9 ಬೆಳವಣಿಗೆ ದರ ಸಾಧಿಸಿದೆ. ಭಾರತ ಜಗತ್ತಿನ ಮುಂದಿನ ಸೂಪರ್ ಪವರ್ ಆಗಬಹುದೆಂದು ಭಾವಿಸುವುದಾಗಿ ಅವರು ನುಡಿದರು.
ಮತ್ತಷ್ಟು
ಆರ್ಥಿಕತೆ ಸಮಗ್ರ ಬೆಳವಣಿಗೆಗೆ ಪ್ರಧಾನಿ ಶ್ಲಾಘನೆ
ರಿಜ್ವಾನುರ್ ಸಾವು: ಸಿಬಿಐ ಅಂತಿಮ ವರದಿ
ಪಾಲಾರ್ ಜಲಾಶಯ: ಕೇಂದ್ರ ಮಧ್ಯಪ್ರವೇಶಕ್ಕೆ ಸು.ಕೋ ಆದೇಶ
ಜಲಂಧರ್ ಜೈಲಿಗೆ ಕೈದಿಗಳಿಂದ ಅಗ್ನಿಸ್ಪರ್ಶ
ಅಡಿಕೆ ಕದ್ದ ಸಣ್ಣ ತಪ್ಪಿಗೆ ಅಮಾನುಷ ಶಿಕ್ಷೆ
ಮಾಯಾವತಿ ಆರೋಪ ತಳ್ಳಿಹಾಕಿದ ಕಾಂಗ್ರೆಸ್