ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ
ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿರುವುದರಿಂದ ಸುಪ್ರೀಂಕೋರ್ಟ್ ಮೇಲೆ ಮೊಕದ್ದಮೆಗಳ ಒತ್ತಡವನ್ನು ತಗ್ಗಿಸುವ ಪ್ರಯತ್ನವಾಗಿ ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸುವ ಯೋಜನೆಯಿದೆ ಎಂದು ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಕೆ. ವೆಂಕಟಪತಿ ತಿಳಿಸಿದ್ದಾರೆ.

ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ವರದಿಗಾರರ ಜತೆ ಮಾತನಾಡುತ್ತಿದ್ಜ ಅವರು, ಸುಪ್ರೀಂಕೋರ್ಟ್ ಪೀಠವನ್ನು ಎಲ್ಲಿ ಸ್ಥಾಪಿಸಲಾಗುವುದೆಂದು ವಿವರ ನೀಡಲಿಲ್ಲ. ರಾಷ್ಟ್ರದ ಕೋರ್ಟ್‌ಗಳ ಕಂಪ್ಯೂಟರೀಕರಣಕ್ಕೆ 410 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ನುಡಿದರು.

ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಮೆಟ್ರೋಪಾಲಿಟನ್ ಕೋರ್ಟ್‌ಗಳಲ್ಲಿ ಕಂಪ್ಯೂಟರೀಕೃತಗೊಳಿಸಲಾಗಿದ್ದು, ಈಗ ಕೆಳ ಕೋರ್ಟ್‌ಗಳನ್ನು ಕೂಡ ಕಂಪ್ಯೂಟರೀಕರಣ ಮಾಡಲಾಗುವುದು ಎಂದು ನುಡಿದರು. ಗ್ರಾಮಮಟ್ಟದಲ್ಲಿ ಸಮಸ್ಯೆಗಳ ಪರಿಹಾರಕ್ಕೆ 7000 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಮತ್ತು ನ್ಯಾಯಾಧೀಶರನ್ನು ಶೀಘ್ರದಲ್ಲೇ ನೇಮಿಸಿಕೊಳ್ಳಲಾಗುವುದು ಎಂದು ಅವರು ನುಡಿದರು.

ಪ್ರಸ್ತುತ ಕಾನೂನುಗಳು ಭಯೋತ್ಪಾದನೆ ನಿಗ್ರಹಕ್ಕೆ ಸಾಕಾಗುವಷ್ಟಿದ್ದು, ಪೊಟಾ ಮುಂತಾದ ಕಾನೂನುಗಳನ್ನು ಮರುಜಾರಿಗೆ ತರುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು
ಮಾರಿಷಿಯಸ್ ಪ್ರಧಾನಿ, ಪ್ರಣವ್ ಮುಖರ್ಜಿ ಭೇಟಿ
ಆರ್ಥಿಕತೆ ಸಮಗ್ರ ಬೆಳವಣಿಗೆಗೆ ಪ್ರಧಾನಿ ಶ್ಲಾಘನೆ
ರಿಜ್ವಾನುರ್ ಸಾವು: ಸಿಬಿಐ ಅಂತಿಮ ವರದಿ
ಪಾಲಾರ್ ಜಲಾಶಯ: ಕೇಂದ್ರ ಮಧ್ಯಪ್ರವೇಶಕ್ಕೆ ಸು.ಕೋ ಆದೇಶ
ಜಲಂಧರ್ ಜೈಲಿಗೆ ಕೈದಿಗಳಿಂದ ಅಗ್ನಿಸ್ಪರ್ಶ
ಅಡಿಕೆ ಕದ್ದ ಸಣ್ಣ ತಪ್ಪಿಗೆ ಅಮಾನುಷ ಶಿಕ್ಷೆ