ಜಿಲ್ಲೆಯ ಬಸವಂಡ್ ನಗರ ಪ್ರದೇಶದ ಪಿಂಪಲ್‌ಗಾಂವ್‌ನಲ್ಲಿ ಟ್ರಕ್ಕೊಂದು ಹರಿದು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಪಿಂಪಲ್‌ಗಾಂವ್ ಬಸವಂಡ್ ಪ್ರದೇಶದ ವೀಟ್‌ಭಟ್ಟಿ ಕೊಳೆಗೇರಿ ಪ್ರದೇಶದ ನಿವಾಸಿಗಳಾದ ರೋಷ್ನಿ ಜಾಧವ್(13),ಗುಡ್ಡಿ ದುಲೆ(13) ಮತ್ತು ಸಚಿನ್ ಖರಾಟೆ(12) ರಸ್ತೆಬದಿಯಲ್ಲಿ ಬೆಂಕಿಯನ್ನು ಕಾಯಿಸಿಕೊಳ್ಳುವಾಗ ನಿಪಾಡ್‌ಗೆ ತೆರಳುತ್ತಿದ್ದ ಟ್ರಕ್ ಅವರ ಮೈಮೇಲೆ ಹರಿಯಿತೆಂದು ತಿಳಿದುಬಂದಿದೆ.
ಹಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಸ್ತೆಯಲ್ಲಿ ಇನ್ನೊಂದು ಟ್ರಕ್ಕನ್ನು ಹಿಂದಿಕ್ಕಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆಯೆಂದು ಗೊತ್ತಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆಯ ಬಗ್ಗೆ ಉದ್ರಿಕ್ತರಾದ ಸ್ಥಳೀಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
|