ಮಾಜಿ ಪ್ರಧಾನಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಎ.ಬಿ.ವಾಜಪೇಯಿ ಅವರಿಗೆ ರಾಷ್ಟ್ರದ ಪರಮೋಚ್ಛ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕೆಂದು ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಬುಧವಾರ ಒತ್ತಾಯಿಸುವ ಮೂಲಕ ಬಿಜೆಪಿಯಲ್ಲಿ ಬದಲಾದ ಅಧಿಕಾರ ಕೇಂದ್ರವನ್ನು ಬೆಳಕಿಗೆ ತಂದಿದ್ದಾರೆ.
ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ವಾಜಪೇಯಿ ಅವರ ಹೆಸರನ್ನು ಪ್ರತಿಷ್ಠಿತ ಗೌರವಕ್ಕೆ ಪರಿಗಣಿಸಬೇಕೆಂದು ಅವರು ಯುಪಿಎ ಸರ್ಕಾರವನ್ನು ಆಗ್ರಹಿಸಿದರು. ವಾಜಪೇಯಿ ಅವರು ಭಾರತದ ರಾಜಕೀಯಕ್ಕೆ ಸಲ್ಲಿಸಿದ ಸೇವೆ ಮತ್ತು ರಾಜನೀತಿಜ್ಞತೆಯ ದೃಷ್ಟಿಯಿಂದ ಅವರು ಈ ಪ್ರಶಸ್ತಿಗೆ ಅರ್ಹರು ಎಂದು ಆಡ್ವಾಣಿ ಹೇಳಿದ್ದಾರೆ.
ಆಡ್ವಾಣಿ ಅವರು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಹೆಸರಿಸಿದ ಕೆಲವು ವಾರಗಳ ಬಳಿಕ ಆಡ್ವಾಣಿ ಅವರ ಪತ್ರ ಹೊರಬಿದ್ದಿದೆ. ವಾಜಪೇಯಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿದ್ದು, ತಮ್ಮ ಡೆಪ್ಯೂಟಿಗೆ ಪಕ್ಷದ ಅಧಿಕಾರ ಹಸ್ತಾಂತರಿಸುವುದರ ಸುಳಿವು ಇದಾಗಿದೆ.
ಮಹಿಳೆಯರಿಗೆ ಅಧಿಕಾರ ಮತ್ತು ಸಾಮಾಜಿಕ ಸಮಾನತೆಯ ಚಾಂಪಿಯನ್ ಎನಿಸಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಆಳವಾದ ಒಳನೋಟದ ಕವಿಯಾಗಿದ್ದರು. 1998 ಮತ್ತು 2005ರ ನಡುವೆ ವಾಜಪೇಯಿ ಅವರು ಭಾರತದ ಪ್ರಧಾನಮಂತ್ರಿಯಾಗಿದ್ದರು. ಜನಸಮೂಹದ,ವರ್ಚಸ್ವಿ ನಾಯಕ ವಾಜಪೇಯಿ 1994ರಲ್ಲಿ ತಮ್ಮ ಗೌರವಾನ್ವಿತ ನಡವಳಿಕೆಗಾಗಿ ಉತ್ತಮ ಸಂಸದೀಯಪಟು ಎಂಬ ಬಿರುದಿಗೆ ಪಾತ್ರರಾಗಿದ್ದರು.
|