ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂಸೆ ಮುಂದುವರಿಸಿದರೆ ಎಚ್ಚರಿಕೆ: ಮಾಯಾವತಿ
PTI
ಸಮಾಜವಾದಿ ಪಕ್ಷದ ಕಾರ್ಯಕರ್ತರು ರಾಜ್ಯದಲ್ಲಿ ಹಿಂಸಾಚಾರ ಮುಂದುವರಿಸಿದರೆ ಆ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಬುಧವಾರ ಎಚ್ಚರಿಸಿದ್ದಾರೆ.ಎಸ್‌ಪಿ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಿಂಸಾಚಾರ ನಡೆಸುತ್ತಿದ್ದು,ಎಟಾವಾದಲ್ಲಿ ಒಬ್ಬ ವ್ಯಕ್ತಿ ಗೋಲಿಬಾರ್‌ಗೆ ಬಲಿಯಾಗಿದ್ದಾನೆ.

ಪಕ್ಷದ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರನ್ನು ಪೊಲೀಸರು ಥಳಿಸಿದ ಆರೋಪದ ಮೇಲೆ ಎಸ್‌ಪಿ ಕಾರ್ಯಕರ್ತರು ಮಂಗಳವಾರ ರಾತ್ರಿಯಿಂದ ದಾಂಧಲೆ ನಡೆಸಿದ್ದಾರೆ. ಶಿವಪಾಲ್ ಸಿಂಗ್ ಅವರನ್ನು ಪೊಲೀಸರು ಥಳಿಸಿದ ಸುದ್ದಿ ರಾಜ್ಯದ ಇತರೆ ಭಾಗಗಳಿಗೂ ತಲುಪಿ ಎಸ್‌ಪಿ ಕಾರ್ಯಕರ್ತರು ಹಿಂಸಾಚಾರದಲ್ಲಿ ಮುಳುಗಿದರು.

ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ಮಾಯಾವತಿ ತಮ್ಮ ಸರ್ಕಾರವು ಕಾನೂನು ಸುವ್ಯವಸ್ಥೆ ಪಾಲನೆಗೆ ಬದ್ಧವಾಗಿದೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ನುಡಿದರು.

ಮುಲಾಯಂ ಸಿಂಗ್ ಕಾನೂನು ಮುರಿದರೂ ಕೂಡ ಅವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಯಾವತಿ ಹೇಳಿದರು. ಸಮಾಜವಿರೋಧಿ ಶಕ್ತಿಗಳು ಪೊಲೀಸರ ಮೇಲೆ ದಾಳಿ ನಡೆಸಿದಾಗ ಪೊಲೀಸರು ಗೋಲಿಬಾರ್ ಮಾಡಿದರು ಎಂದು ಮಾಯಾವತಿ ಗೋಲಿಬಾರ್ ಕ್ರಮವನ್ನು ಸಮರ್ಥಿಸಿಕೊಂಡರು. ಪೊಲೀಸರ ಕ್ರಮ ಅಪ್ರಚೋದಿತವಲ್ಲ ಎಂದು ಹೇಳಿದ ಅವರು ಹಿಂಸಾಚಾರದಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಮತ್ತಷ್ಟು
ವಾಜಪೇಯಿಗೆ ಭಾರತರತ್ನ: ಆಡ್ವಾಣಿ ಆಗ್ರಹ
ಅನ್ಸಾಲ್ ಸೋದರರ ಶಿಕ್ಷೆ ಹೆಚ್ಚಿಸಲು ಅರ್ಜಿ
ಉತ್ತರಪ್ರದೇಶದಲ್ಲಿ ಗೋಲೀಬಾರ್: ಇಬ್ಬರ ಸಾವು
ಟ್ರಕ್ ಹರಿದು ಮೂವರು ಮಕ್ಕಳ ಸಾವು
ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ
ಮಾರಿಷಿಯಸ್ ಪ್ರಧಾನಿ, ಪ್ರಣವ್ ಮುಖರ್ಜಿ ಭೇಟಿ