ರಾಜಸ್ತಾನದ ಆಜ್ಮಿರ್ ಜಿಲ್ಲೆಯ ಪುಷ್ಕಾರ್ ದೇವಸ್ಥಾನದ ಅರ್ಚಕನೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರು ಬುಧವಾರ ದೂರುನೀಡಿದ್ದಾರೆ.
ಪುಷ್ಕರ್ ಪೊಲೀಸ್ ಠಾಣೆಗೆ 28 ವರ್ಷ ವಯಸ್ಸಿನ ಪ್ರವಾಸಿ ಮಹಿಳೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಪುಷ್ಕರ್ ಕೆರೆಯ ದಡದಲ್ಲಿರುವ ಪಾಪಮೋಚನ ಮಂದಿರದಲ್ಲಿ ತಾವು ಪೂಜೆ ಸಲ್ಲಿಸುತ್ತಿದ್ದಾಗ, ಅರ್ಚಕ ತನ್ನನ್ನು ಚುಡಾಯಿಸಿದ್ದಲ್ಲದೇ ಲೈಂಗಿಕ ಕಿರುಕುಳವನ್ನು ನೀಡಿದ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಮೆರಿಕದ ಒರೆಗಾನ್ ನಿವಾಸಿಯಾದ ಮಹಿಳೆಯು ಪವಿತ್ರ ನಗರಕ್ಕೆ ಯಾತ್ರೆಗಾಗಿ ಆಗಮಿಸಿದ್ದು, ಅರ್ಚಕನನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ನುಡಿದರು.
ಪ್ರವಾಸಿಗಳಿಗೆ ಸಂಬಂಧಿಸಿದ ವಿವಾದಗಳಿಂದ ದೇವಸ್ತಾನ ನಗರಿ ಕುಖ್ಯಾತಿ ಗಳಿಸಿದ್ದು, ಎರಡು ವರ್ಷಗಳ ಕೆಳಗೆ ಪುಷ್ಕಾರ್ ಹೊಟೆಲ್‌ನಲ್ಲಿ ಐವರು ತಮ್ಮ ಮೇಲೆ ಮಾನಭಂಗ ಮಾಡಿದರು ಎಂದು ಜಪಾನಿನ ಮಹಿಳೆಯೊಬ್ಬರು ಆರೋಪಿಸಿದ್ದರು. ಮೋಜಿನ ಕೂಟದಲ್ಲಿ ಇಬ್ಬರು ಇಸ್ರೇಲಿ ಪ್ರವಾಸಿಗಳನ್ನು ವಿವಸ್ತ್ರಗೊಳಿಸಿದ ಘಟನೆಯಿಂದ ಒಂದು ವರ್ಷದ ಕೆಳಗೆ ಪುಷ್ಕಾರ್ ಸುದ್ದಿಮಾಡಿತ್ತು.
|