ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ವಸ್ತ್ರಶಕ್ತ ಜಲಾಂತರ್ಗಾಮಿ ನಿಗದಿತ ಸಮಯಕ್ಕೆ
ಸ್ವದೇಶೀ ನಿರ್ಮಿತ ಅಣ್ವಸ್ತ್ರಶಕ್ತ ಸಬ್‌ಮೆರಿನ್ ಮತ್ತು ಸಮರ ಕ್ಷಿಪಣಿಗಳ ಉತ್ಪಾದನೆ ಮೊದಲಾದ ಭಾರತದ ಶಸ್ತ್ರಾಸ್ತ್ರ ಯೋಜನೆಯು ನಿಗದಿಯಾದಂತೆ ಮುಂದುವರಿಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ತಿಳಿಸಿದ್ದಾರೆ.

ಕೌಲಾಲಂಪುರದಿಂದ ಮರಳಿದ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ -ಡಿಆರ್‌ಡಿಒ ದ ಸ್ವರ್ಣ ಮಹೋತ್ಸವ ಸಮಾರಂಭ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಈ ಕುರಿತು ವಿವರ ನೀಡಲು ನಿರಾಕರಿಸಿದರು.

ಇದೇ ವೇಳೆ, ಅಣ್ವಸ್ತ್ರ ಜಲಾಂತರ್ಗಾಮಿ ಯೋಜನೆಯಾದ "ಸುಧಾರಿತ ತಂತ್ರಜ್ಞಾನ ನಿರೂಪಕ"ವು 2009ರ ವೇಳೆಗೆ ಪರೀಕ್ಷೆಗೆ ಸಿದ್ಧವಾಗಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಸೇನೆಗಾಗಿ 197 ಲಘು ಹೆಲಿಕಾಪ್ಟರ್‌ಗಳ ಖರೀದಿಗೆ ಅಂತಾರಾಷ್ಟ್ರೀಯ ಟೆಂಡರ್ ಕರೆಯುವಾಗ ಯುರೋಪಿನ ವೈಮಾನಿಕ ಸಂಸ್ಥೆ ಇಎಡಿಎಸ್ ಅನ್ನು ಹೊರಗಿರಿಸಿವು ಯಾವುದೇ ಪ್ರಸ್ತಾಪಗಳಿಲ್ಲ ಎಂದು ಆಂಟನಿ ಸ್ಪಷ್ಟಪಡಿಸಿದರು.

ಹೊಸ ಟೆಂಡರುಗಳಲ್ಲಿ ಹೆಚ್ಚು ಹೆಚ್ಚು ಸಂಸ್ಥೆಗಳು ಭಾಗವಹಿಸಬೇಕೆಂಬುದು ನಮ್ಮ ಇಚ್ಛೆ ಎಂದು ಅವು ಹೇಳಿದರಲ್ಲದೆ, ಶತಕೋಟಿ ಡಾಲರ್ ಗುತ್ತಿಗೆ ಪಡೆಯುವುದಕ್ಕೆ ಪ್ರಬಲ ಸ್ಪರ್ಧೆಯಲ್ಲಿರುವ ಯೂರೋಕಾಪ್ಟರ್ ಸಂಸ್ಥೆಯೂ ಟೆಂಡರಿನಲ್ಲಿ ಭಾಗವಹಿಸಲಿದೆ ಎಂದರು.
ಮತ್ತಷ್ಟು
ಹಿಮಪಾತ: 7 ಸೈನಿಕರು ಸೇರಿ 15 ಸಾವು
ಲೈಂಗಿಕ ಕಿರುಕುಳ: ವಿದೇಶಿ ಮಹಿಳೆ ದೂರು
ಹಿಂಸೆ ಮುಂದುವರಿಸಿದರೆ ಎಚ್ಚರಿಕೆ: ಮಾಯಾವತಿ
ವಾಜಪೇಯಿಗೆ ಭಾರತರತ್ನ: ಆಡ್ವಾಣಿ ಆಗ್ರಹ
ಅನ್ಸಾಲ್ ಸೋದರರ ಶಿಕ್ಷೆ ಹೆಚ್ಚಿಸಲು ಅರ್ಜಿ
ಉತ್ತರಪ್ರದೇಶದಲ್ಲಿ ಗೋಲೀಬಾರ್: ಇಬ್ಬರ ಸಾವು