ಮುಂಬೈನ ಖ್ಯಾತ ಬಿಲ್ಡರ್ ಹತ್ಯೆಯಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಸಿಐಡಿ ಆರೋಪಿಸಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಬಿಪಿನ್ ಬಿಹಾರಿ ಮತ್ತು ಡಿಐಜಿಪಿ ಅರೂಪ್ ಪಟ್ನಾಯಕ್, ಹಿರಿಯ ಇನ್ಸೆಪೆಕ್ಟರ್ ಪ್ರದೀಪ್ ಶಿಂಧೆ ಹಾಗೂ ಆರು ಮಂದಿ ಪೊಲೀಸರು ಹತ್ಯೆಯ ಒಳಸಂಚಿನಲ್ಲಿ ಭಾಗಿಯಾಗಿರುವ ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ.
ಕಳೆದ 11 ತಿಂಗಳಿನಿಂದ ನಿರಂತರವಾಗಿ ಪ್ರಕರಣವನ್ನು ನಿಖರವಾಗಿ ತನಿಖೆ ನಡೆಸಿದ ಮಹಾರಾಷ್ಟ್ರ ಸಿಐಡಿ ವಿಭಾಗದ ಅಧಿಕಾರಿಗಳು ಅಂತಿಮವಾಗಿ ಬಿಲ್ಡರ್‌ಗಳು ಮತ್ತು ಪೊಲೀಸ್ ಅಧಿಕಾರಿಗಳ ಅಪವಿತ್ರ ಮೈತ್ರಿಯನ್ನು ಬಹಿರಂಗಪಡಿಸುವುದರೊಂದಿಗೆ ಅಂತ್ಯವಾಗಿದೆ.
ಪ್ರಕರಣದ ತನಿಖಾ ವರದಿಯನ್ನು ಮುಂದಿನ 10 ದಿನಗಳಲ್ಲಿ ಗೃಹಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ಸಿಐಡಿ ಇಲಾಖೆಯ ಮೂಲಗಳು ತಿಳಿಸಿವೆ.
ಮುಂಬೈನ ಖ್ಯಾತ ಬಿಲ್ಡರ್ ರಶ್ಮಿಕಾಂತ ಶಾಹ ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಬಲದೊಂದಿಗೆ ಎದುರಾಳಿ ಬಿಲ್ಡರ್ ರಾಜೇಂದ್ರ್ ಚತುರ್ವೇದಿ ಅವರ ಹತ್ಯೆ ಮಾಡಲಾಗಿತ್ತು ಎಂದು ಸಿಐಡಿ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
|