ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ
ಗುರುವಾರವಿಡೀ ಹಣದ್ದೇ ಕಾರುಬಾರು. ಜನಸಾಮಾನ್ಯ 1 ಲಕ್ಷ ಕಾರಿನ ಮೋರೆ ನೋಡುವ ಖುಷಿಯಲ್ಲಿದ್ದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ವೇತನದಲ್ಲಿ ಭರ್ಜರಿ ಏರಿಕೆಯ ಸಂತಸ.

ಗುರುವಾರ ಸಭೆ ಸೇರಿದ ಕೇಂದ್ರ ಸಂಪುಟವು, ರಾಷ್ಟ್ರಪತಿಯವರ ವೇತನವನ್ನು ಶೇ.100ರಷ್ಟು ಅಂದರೆ ಮಾಸಿಕ 1 ಲಕ್ಷ ರೂ.ಗೆ ಏರಿಸಿದ್ದರೆ, ಉಪರಾಷ್ಟ್ರಪತಿ ವೇತನವನ್ನು 85 ಸಾವಿರ ರೂ.ಗೆ ಮತ್ತು ರಾಜ್ಯಪಾಲರ ವೇತನವನ್ನು 75 ಸಾವಿರ ರೂ.ಗೆ ಏರಿಸಲು ನಿರ್ಧರಿಸಿತು.

ಹೊಸ ನಿರ್ಣಯದ ಪ್ರಕಾರ ಮಾಜಿ ರಾಷ್ಟ್ರಪತಿಗಳು ಕೂಡ ಶೇ.100 ಆದಾಯ ಹೆಚ್ಚಳಕ್ಕೆ ಪಾತ್ರರಾಗಿದ್ದಾರೆ. ವಾರ್ಷಿಕವಾಗಿ ಅವರಿಗೆ ದೊರೆಯುತ್ತಿದ್ದ 3 ಲಕ್ಷ ರೂ. ಬದಲು ಇನ್ನು ಮುಂದೆ ಅವರು ವಾರ್ಷಿಕ 6 ಲಕ್ಷ ರೂ. ಪಡೆಯಲಿದ್ದಾರೆ.

ಕೊನೆಯ ಬಾರಿಗೆ ರಾಷ್ಟ್ರಪತಿ ವೇತನ ಹೆಚ್ಚಳವಾದದ್ದು 1998ರಲ್ಲಿ.
ಮತ್ತಷ್ಟು
ಶೀಘ್ರ ಎಪಿಸಿಸಿ ಅಧ್ಯಕ್ಷರ ನೇಮಕ : ಮೋಯಿಲಿ
ನಿರಶನ ಮುಂದುವರೆಸಲು ಎಸ್‌ಪಿ ಪಕ್ಷ ನಿರ್ಧಾರ
ಬಿಲ್ಡರ್ ಹತ್ಯೆಯಲ್ಲಿ ಹಿರಿಯ ಅಧಿಕಾರಿಗಳ ಒಳಸಂಚು
ಅಣ್ವಸ್ತ್ರಶಕ್ತ ಜಲಾಂತರ್ಗಾಮಿ ನಿಗದಿತ ಸಮಯಕ್ಕೆ
ಹಿಮಪಾತ: 7 ಸೈನಿಕರು ಸೇರಿ 15 ಸಾವು
ಲೈಂಗಿಕ ಕಿರುಕುಳ: ವಿದೇಶಿ ಮಹಿಳೆ ದೂರು