ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರ: ರೈಲಿನಲ್ಲಿ ಪತ್ತೆಯಾದ ಬಾಂಬ್ ನಿಷ್ಕ್ರಿಯ
ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಈಶಾನ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ದೇಶೀ ಬಾಂಬ್‌ಗಳನ್ನು ಪತ್ತೆಯಾಗಿದ್ದು, ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೈಲನ್ನು ಕಟಿಹಾರ್ ರೈಲು ನಿಲ್ದಾಣ ಬಳಿ ಎರಡು ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿ ತೀವ್ರ ತಪಾಸಣೆಗೊಳಪಡಿಸಲಾಯಿತು.

ಕಟಿಹಾರ್‌ನಲ್ಲಿ ಮುಂಜಾನೆ 6.30ರ ಸುಮಾರಿಗೆ ರೈಲನ್ನೇರಿದ್ದ ಪ್ರಯಾಣಿಕನೊಬ್ಬ, ಶಂಕಾಸ್ಪದ ರೀತಿಯಲ್ಲಿ ಕಂಡುಬಂದ ಪತ್ರಿಕೆಯಲ್ಲಿ ಸುತ್ತಲಾಗಿದ್ದ ಪೊಟ್ಟಣವೊಂದನ್ನು ನೋಡಿದ. ಅದನ್ನು ಬಿಚ್ಚಿದಾಗ ಬಾಂಬ್ ಪತ್ತೆಯಾಗಿತ್ತು. ತಕ್ಷಣವೇ ಆತ ರೈಲು ಚಾಲಕನನ್ನು ಎಚ್ಚರಿಸಿದ ಎಂದು ರೈಲ್ವೇ ರಕ್ಷಣಾ ದಳದ ಉಪಾಯುಕ್ತ ಎಸ್.ಬಿ.ಗೋಸ್ವಾಮಿ ತಿಳಿಸಿದ್ದಾರೆ.

ರೈಲ್ವೇ ರಕ್ಷಣಾ ಪಡೆ ಮತ್ತು ಸರಕಾರಿ ರೈಲ್ವೇ ಪೊಲೀಸರು ತ್ವರಿತವಾಗಿ ಅಲ್ಲಿಗೆ ಧಾವಿಸಿದರು ಮತ್ತು ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಸೂಚಿಸಲಾಯಿತು. ಬಳಿಕ ಆ ಬಾಂಬ್‌ಗಳನ್ನು ನೀರು ತುಂಬಿದ ಬಕೆಟ್‌ಗೆ ಹಾಕಿ ಅದನ್ನು ನಿಶ್ಶಕ್ತಗೊಳಿಸಲಾಯಿತು. ಸುಮಾರು ಎರಡು ಗಂಟೆಯ ಬಳಿಕ ರೈಲು ತನ್ನ ಪ್ರಯಾಣವನ್ನು ಪುನಃ ಆರಂಭಿಸಿತು.
ಮತ್ತಷ್ಟು
ಭಾರತ ರತ್ನ: ಉತ್ತರಿಸದೆ ನುಣುಚಿಕೊಂಡ ಪ್ರಧಾನಿ
ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರ ವೇತನ ಹೆಚ್ಚಳ
ಶೀಘ್ರ ಎಪಿಸಿಸಿ ಅಧ್ಯಕ್ಷರ ನೇಮಕ : ಮೋಯಿಲಿ
ನಿರಶನ ಮುಂದುವರೆಸಲು ಎಸ್‌ಪಿ ಪಕ್ಷ ನಿರ್ಧಾರ
ಬಿಲ್ಡರ್ ಹತ್ಯೆಯಲ್ಲಿ ಹಿರಿಯ ಅಧಿಕಾರಿಗಳ ಒಳಸಂಚು
ಅಣ್ವಸ್ತ್ರಶಕ್ತ ಜಲಾಂತರ್ಗಾಮಿ ನಿಗದಿತ ಸಮಯಕ್ಕೆ