ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ಏರ್ಪಡಿಸಲಾಗುವ ಗೂಳಿ ಕಾಳಗವನ್ನೊಳಗೊಂಡ "ಜಲ್ಲಿ ಕಟ್ಟು" ಸಂಪ್ರದಾಯಕ್ಕೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ಸಂಪ್ರದಾಯಕ್ಕೆ ಸಂಬಂಧಿಸಿ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಉದ್ದೇಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ನ್ಯಾಯಪೀಠವು ಸ್ಪಷ್ಟಪಡಿಸಿದೆ.
ಆದರೆ ಅದು, "ರೇಕ್ಲಾ" ಎಂಬ ಎತ್ತಿನ ಬಂಡಿಯ ಸ್ಪರ್ಧೆಗೆ ಅನುಮತಿ ನೀಡಿದೆ. ಇದಕ್ಕೆ ಅಧಿಕಾರಿಗಳ ಮೇಲ್ವಿಚಾರಣೆ ಅಗತ್ಯ ಎಂದೂ ನ್ಯಾಯಪೀಠ ತಿಳಿಸಿದೆ.
"ಜಲ್ಲಿಕಟ್ಟು" ಎಂಬ ಹಿಂಸಾತ್ಮಕ ಸಂಪ್ರದಾಯಕ್ಕೆ ನಿಷೇಧ ವಿಧಿಸಿರುವ ನ್ಯಾಯಪೀಠವು, ಪ್ರಾಣಿಗಳನ್ನು ಕ್ರೂರವಾಗಿ ನಡೆಯಿಸಿಕೊಳ್ಳುವ ಯಾವುದೇ ಪದ್ಧತಿಗೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
|