ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪಾಯದ ಗುಂಡಿಯ ಅಗತ್ಯವಿಲ್ಲ: ಪ್ರಣವ್
PTI
ಚೀನದಿಂದ ಅತಿಕ್ರಮಣವು ವಾಸ್ತವ ನಿಯಂತ್ರಣ ರೇಖೆಯಲ್ಲಿ ಕೆಲವು ಬಾರಿ ಸಂಭವಿಸಿದ್ದರೂ, ಯಾವುದೇ ಅಪಾಯದ ಗುಂಡಿಯನ್ನು ಒತ್ತುವ ಅಗತ್ಯವಿಲ್ಲ ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಶನಿವಾರ ತಿಳಿಸಿದ್ದಾರೆ. ಈ ಹಂತದಲ್ಲಿ ಚಿಂತೆ ಮಾಡಲು ಯಾವ ಕಾರಣವೂ ಇಲ್ಲ ಮತ್ತು ನಮ್ಮ ವ್ಯವಸ್ಥೆ ಸರಿಯಾಗಿ ಹೋಗುತ್ತಿದೆ ಎಂದು ಸಿಎನ್‌ಎನ್‌-ಐಬಿಎನ್‌ನ ಡೆವಿಲ್ಸ್ ಅಡ್ವೊಕೇಟ್ ಕಾರ್ಯಕ್ರಮದಲ್ಲಿ ಕರಣ್ ಥಾಪರ್ ಅವರಿಗೆ ತಿಳಿಸಿದರು.

ಕೆಲವು ಬಾರಿ ಇಂತಹ ಅತಿಕ್ರಮಣಗಳು ನಡೆಯುತ್ತವೆ. ನಾವು ಅದನ್ನು ತಕ್ಷಣವೇ ಕೈಗೆತ್ತಿಕೊಳ್ಳುತ್ತೇವೆ. ಇಂತಹ ಸಮಸ್ಯೆಗಳನ್ನು ಪ್ರಸ್ತಾಪಿಸಲು ಕೆಲವು ವ್ಯವಸ್ಥೆ ಮಾಡಿದ್ದೇವೆ ಎಂದು ಅವರು ನುಡಿದರು.

ಅತಿಕ್ರಮಣದ ಸಂಖ್ಯೆಗಳು ಹೆಚ್ಚಾಗಿವೆಯೇ ಎಂದು ಪ್ರಶ್ನಿಸಿದಾಗ, ಅದು ಅಸ್ವಾಭಾವಿಕವಲ್ಲ. ಹಠಾತ್ತನೇ ಹೆಚ್ಚಾಗಿದೆ ಎಂದು ಪ್ರಣವ್ ಮುಖರ್ಜಿ ಹೇಳಿದರು. ಮೂರು ದಿನಗಳ ಭೇಟಿಗಾಗಿ ಶನಿವಾರ ರಾತ್ರಿ ಬೀಜಿಂಗ್‌ಗೆ ತೆರಳಲಿರುವ ಪ್ರಧಾನಮಂತ್ರಿ ಚೀನದ ಸಹೋದ್ಯೋಗಿ ವೆನ್ ಜಿಯಾಬೊ ಜತೆ ವ್ಯಾಪಕ ಮಾತುಕತೆ ನಡೆಸಲಿದ್ದಾರೆ ಮತ್ತು ಅಧ್ಯಕ್ಷ ಹು ಜಿಂಟಾವೊ ಅವರನ್ನು ಕೂಡ ಭೇಟಿ ಮಾಡಲಿದ್ದಾರೆ.

ಚೀನದ ಗಡಿಯಲ್ಲಿ ಮೂಲಸೌಲಭ್ಯ ಹೆಚ್ಚಳದ ಬಗ್ಗೆ ಹಿರಿಯ ಸೇನಾಧಿಕಾರಿಗಳು ವ್ಯಕ್ತಪಡಿಸಿರುವ ಕಳವಳದ ಬಗ್ಗೆ ಪ್ರಶ್ನಿಸಿದಾಗ, ರಸ್ತೆ, ವಿದ್ಯುತ್, ಮತ್ತಿತರ ಮೂಲಸೌಲಭ್ಯಗಳು ನಮಗಿಂತ ಚೀನದ ಕಡೆ ಮೇಲ್ಮಟ್ಟದಲ್ಲಿದೆ ಎನ್ನುವುದು ನಿಜ ಸಂಗತಿ. ಭಾರತ ತನ್ನ ಕಣ್ಗಾವಲನ್ನು ತಗ್ಗಿಸುವ ಪ್ರಶ್ನೆಯೇ ಇಲ್ಲ. ಆದರೆ ಅದೇ ಸಂದರ್ಭದಲ್ಲಿ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಇರುವ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಅಪಾಯದ ಗುಂಡಿಯನ್ನು ಒತ್ತುವ ಅಗತ್ಯವೇ ಇಲ್ಲ ಎಂದು ಪ್ರಣವ್ ನುಡಿದರು.
ಮತ್ತಷ್ಟು
ಕೋಲ್ಕತಾದಲ್ಲಿ 2500ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ವಾಜಪೇಯಿಗೆ ಭಾರತ ರತ್ನ;ಶೀಘ್ರ ನಿರ್ಧಾರ
ಇಂಟರ್ನೆಟ್‌ನಲ್ಲಿ ಅಶ್ಲೀಲ ಪ್ರೊಫೈಲ್: ವಿದ್ಯಾರ್ಥಿ ಸೆರೆ
ಬಸುಗೆ ಭಾರತ ರತ್ನ ಕೊಡಬಹುದು: ಸಿಪಿಎಂ
ಗೂಳಿಕಾಳಗ ಜಲ್ಲಿಕಟ್ಟು: ಸುಪ್ರೀಂಕೋರ್ಟ್ ಅನುಮತಿ ಇಲ್ಲ
ಬಿಹಾರ: ರೈಲಿನಲ್ಲಿ ಪತ್ತೆಯಾದ ಬಾಂಬ್ ನಿಷ್ಕ್ರಿಯ