ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಕಣ್ಣೀರೇ ಜಮೀನ್ ಪರ್...!
ನಿರ್ದೇಶಕನೂ ಆಗಿಬಿಟ್ಟ ನಟ ಅಮೀರ್ ಖಾನ್, ರಾಜಕಾರಣಿಯೊಬ್ಬರು ಅಳುವಂತೆ ಮಾಡಿದ್ದಾರೆ. ರೀಲ್ ಜೀವನದಲ್ಲಲ್ಲ, ರಿಯಲ್ ಜೀವನದಲ್ಲಿ! ಹಾಗಂತ ಈ ರಾಜಕಾರಣಿಯೇನೂ ಸುರಿಸಿದ್ದು ಮಾಮೂಲಿ ಮೊಸಳೆ ಕಣ್ಣೀರನ್ನಲ್ಲ, ನಿಜವಾದ ಕಣ್ಣೀರನ್ನೇ!

ಆಗಿದ್ದಿಷ್ಟು. ಅಮೀರ್ ಅವರ ಚೊಚ್ಚಲ ನಿರ್ದೇಶನ ಪ್ರಯತ್ನವಾಗಿರುವ "ತಾರೇ ಜಮೀನ್ ಪರ್" ಚಿತ್ರದ ವಿಶೇಷ ಪ್ರದರ್ಶನವನ್ನು ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು. ದೃಷ್ಟಿದೋಷದ ಪುಟಾಣಿಯೊಬ್ಬ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಕಥೆಯುಳ್ಳ ಈ ಚಿತ್ರ ನೋಡಿದೆ ಆಡ್ವಾಣಿಗೆ ಕಣ್ಣೀರು ತಡೆದಿಟ್ಟುಕೊಳ್ಳಲಾಗಿಲ್ಲ.

"ಆಡ್ವಾಣಿ ಈ ರೀತಿ ದುಃಖಿತರಾಗಿರುವುದನ್ನು ನಾನು ಮೊದಲ ಬಾರಿ ನೋಡಿದೆ. ಅವರಿಗೆ ಸಿನಿಮಾದ ಬಗ್ಗೆ ಸೂಕ್ಷ್ಮ ವಿಮರ್ಶಾತ್ಮಕ ದೃಷ್ಟಿಕೋನವಿದೆ. ಅವರೇ ಈ ಹಿಂದೆ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ನನ್ನ ಲಗಾನ್ ಚಿತ್ರವನ್ನೂ ಅವರು ನೋಡಿದ್ದರು. ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೋಸ್ಕರವಾಗಿಯೇ ಈ ಚಿತ್ರವನ್ನು ಅವರಿಗೆ ತೋರಿಸಲು ನಿರ್ಧರಿಸಿದ್ದೆ. ನನಗಿಂದು ಸಂತೋಷವಾಗಿದೆ" ಎಂದು ನುಡಿದವರು ಅಮೀರ್ ಖಾನ್.

ಈ ಹಿಟ್ ಚಿತ್ರದ ಬಗ್ಗೆ ಆಡ್ವಾಣಿ ಅವರು ಅಮೀರ್ ಖಾನ್‌ರನ್ನು ಬಾಯ್ತುಂಬಾ ಪ್ರಶಂಸಿಸಿದರು. "ನಿರ್ದೇಶಕ ಮತ್ತು ಚಿತ್ರಕಥಾ ರಚನೆಕಾರರಿಬ್ಬರೂ ಅಭಿನಂದನಾರ್ಹರು. ಹಲವು ವರ್ಷಗಳಲ್ಲಿ ನಾನು ಇಂಥ ಚಿತ್ರ ನೋಡಿಲ್ಲ" ಎಂದು ಉದ್ಗರಿಸಿರುವ ಆಡ್ವಾಣಿ, ಪ್ರತಿಯೊಂದು ವಿಭಾಗದಲ್ಲೂ ಇದೊಂದು ಅದ್ಭುತ ಚಿತ್ರ, ಕ್ಲಿಷ್ಟಕರ ಕಥಾವಸ್ತುವನ್ನು ಪ್ರಸ್ತುತಪಡಿಸಿದ ರೀತಿ ಎಷ್ಟು ಅದ್ಭುತವಾಗಿದೆಯೆಂದರೆ, ಪ್ರೇಕ್ಷಕನ ಹೃದಯ ತಟ್ಟುವುದು ಖಂಡಿತಾ ಎಂದಿದ್ದಾರೆ.

2006ರಲ್ಲಿ ಗುಜರಾತಿನಲ್ಲಿ ನರ್ಮದಾ ಬಚಾವೋ ಆಂದೋಲನ ಬೆಂಬಲಿಸಿದ್ದಕ್ಕಾಗಿ ಸಂಘಪರಿವಾರದ ಕೆಂಗಣ್ಣಿಗೆ ತುತ್ತಾಗಿದ್ದ ಅಮೀರ್ ಖಾನ್ ಅವರೇ ನವದೆಹಲಿಯಲ್ಲಿ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು,
ಮತ್ತಷ್ಟು
ಅಪಾಯದ ಗುಂಡಿಯ ಅಗತ್ಯವಿಲ್ಲ: ಪ್ರಣವ್
ಕೋಲ್ಕತಾದಲ್ಲಿ 2500ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ವಾಜಪೇಯಿಗೆ ಭಾರತ ರತ್ನ;ಶೀಘ್ರ ನಿರ್ಧಾರ
ಇಂಟರ್ನೆಟ್‌ನಲ್ಲಿ ಅಶ್ಲೀಲ ಪ್ರೊಫೈಲ್: ವಿದ್ಯಾರ್ಥಿ ಸೆರೆ
ಬಸುಗೆ ಭಾರತ ರತ್ನ ಕೊಡಬಹುದು: ಸಿಪಿಎಂ
ಗೂಳಿಕಾಳಗ ಜಲ್ಲಿಕಟ್ಟು: ಸುಪ್ರೀಂಕೋರ್ಟ್ ಅನುಮತಿ ಇಲ್ಲ