ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರೋಗ್ಯ ಸೇವೆಯಲ್ಲಿ ಭ್ರಷ್ಟತೆ: ತನಿಖೆಗೆ 4 ತಂಡ
ಆರೋಗ್ಯ ಸೇವೆ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ವಿಶ್ವ ಬ್ಯಾಂಕ್ ಬಯಲು ಮಾಡಿದ ಬಳಿಕ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸಲು ನಾಲ್ಕು ತಂಡಗಳನ್ನು ನೇಮಿಸುವುದಾಗಿ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದಾಗಿ ಸರ್ಕಾರ ಎಚ್ಚರಿಸಿದೆ. ಆರೋಗ್ಯ ಸೇವೆ ಯೋಜನೆಗಳಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ರಾಜ್ಯಗಳ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ, ಬಲಪಡಿಸಲು ವಿವರವಾದ ಮಾರ್ಗದರ್ಶಿ ಸೂತ್ರವನ್ನು ಮತ್ತು ವಿಧಿವಿಧಾನವನ್ನು ಕೇಂದ್ರ ಆರೋಗ್ಯ ಸಚಿವಾಲಯ ರೂಪಿಸುತ್ತಿದೆ ಎಂದು ನುಡಿದರು.

ಕ್ಷಯ, ಮಲೇರಿಯ, ಎಚ್‌ಐವಿ/ಏಡ್ಸ್ ನಿಯಂತ್ರಣ ಯೋಜನೆಗಳ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆಯೆಂದು ವಿಶ್ವಬ್ಯಾಂಕ್ ಹೇಳಿರುವ ಕುರಿತು ತನಿಖೆಗೆ ಹಣಕಾಸು ಮತ್ತು ಆರೋಗ್ಯ ಸಚಿವಾಲಯಗಳ ಸದಸ್ಯರಿಂದ ಕೂಡಿದ ನಾಲ್ಕು ತಂಡಗಳನ್ನು ರಚಿಸಲಾಗುವುದು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ನರೇಶ್ ದಯಾಲ್ ತಿಳಿಸಿದರು.

ನಾವು ವರದಿಯನ್ನು ಅಧ್ಯಯನ ಮಾಡಿದ ಬಳಿಕ ವಿವರವಾದ ತನಿಖೆ ಕೈಗೊಳ್ಳುತ್ತೇವೆ. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಅನುಕರಣೀಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡುವುದಾಗಿ ಅವರು ನುಡಿದರು.
ಮತ್ತಷ್ಟು
ಆಡ್ವಾಣಿ ಕಣ್ಣೀರೇ ಜಮೀನ್ ಪರ್...!
ಅಪಾಯದ ಗುಂಡಿಯ ಅಗತ್ಯವಿಲ್ಲ: ಪ್ರಣವ್
ಕೋಲ್ಕತಾದಲ್ಲಿ 2500ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
ವಾಜಪೇಯಿಗೆ ಭಾರತ ರತ್ನ;ಶೀಘ್ರ ನಿರ್ಧಾರ
ಇಂಟರ್ನೆಟ್‌ನಲ್ಲಿ ಅಶ್ಲೀಲ ಪ್ರೊಫೈಲ್: ವಿದ್ಯಾರ್ಥಿ ಸೆರೆ
ಬಸುಗೆ ಭಾರತ ರತ್ನ ಕೊಡಬಹುದು: ಸಿಪಿಎಂ