ಚೀನಾ ಮತ್ತು ಭಾರತ ನಡುವಿನ ಸಂಬಂಧವನ್ನು 'ರೋಮಾಂಚಕ ಮತ್ತು ಕ್ರಿಯಾಶೀಲ ಯೋಜನೆಯತ್ತ ಕೊಂಡೊಯ್ಯುವ' ಪ್ರಯತ್ನದೊಂದಿಗೆ ಪ್ರಥಮ ಬಾರಿಗೆ ಬೀಜಿಂಗ್ ಭೇಟಿ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು.
ಚೀನಾದ ಉಪ ಕಾರ್ಯನಿರ್ವಾಹಕ ವಿದೇಶಿ ಸಚಿವ ಮತ್ತು ಭಾರತದೊಂದಿಗಿನ ಗಡಿ ಮಾತುಕತೆಯ ವಿಶೇಷ ಪ್ರತಿನಿಧಿ ಡಾಯ್ ಬಿಂಗೋ ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಸಿಂಗ್ ಅವರನ್ನು ಭಾನುವಾರ ಮುಂಜಾನೆ ಬರಮಾಡಿಕೊಂಡರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಹಾಗೂ ಪತ್ನಿ ಗುರ್ ಶರಣ್ ಕೌರ್ ಅವರೊಂದಿಗೆ ಬೀಜಿಂಗ್‌ಗೆ ಆಗಮಿಸಿದ ಸಿಂಗ್ ಅವರನ್ನು ಭಾರತೀಯ ರಾಯಭಾರಿ ನಿರುಪಮಾ ರಾವ್ ಮತ್ತು ಇತರ ಅಧಿಕಾರಿಗಳು ಕೂಡಾ ಬರಮಾಡಿಕೊಂಡರು. ಚೀನಾ ಪ್ರಧಾನಿ ವೆನ್ ಜಿಯಾಬೋ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಯನ್ನು ಪ್ರದಾನಿ ಸಿಂಗ್ ನಡೆಸಲಿದ್ದಾರೆ.ಅಲ್ಲದೆ ಚೀನಾ ಅಧಿಕಾರಿಗಳೊಂದಿಗೆ ಆರ್ಥಿಕ ಬೆಂಬಲದ ಕುರಿತು ಪ್ರಧಾನಿ ಸಿಂಗ್ ಮಾತುಕತೆ ನಡೆಸಲಿದ್ದಾರೆ.
|