ಭಾರತ ಮತ್ತು ಚೀನಾ ನಡುವಣ ಗಡಿರೇಖೆಯಲ್ಲಿ ಚೀನಿಯರು ಕೆಲವೊಮ್ಮೆ ಹಠಾತ್ ದಾಳಿ ನಡೆಸುತ್ತಿದ್ದು, ಈ ವಿಚಾರದಲ್ಲಿ ಭೀತಿಗೊಳ್ಳುವ ಯಾವುದೇ ಅಗತ್ಯವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಚೀನಿಯರ ಹಠಾತ್ ದಾಳಿ ಬಗ್ಗೆ ಭೀತಿ ಪಡುವ ಅಗತ್ಯವಿಲ್ಲ, ಈ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ನಮ್ಮ ಸೇನೆ ಸಮರ್ಥವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೆಲವೊಮ್ಮೆ ಚೀನಿಯರು ಹಠಾತ್ ದಾಳಿ ನಡೆಸುತ್ತಾರೆ. ನಾವು ತತ್‌ಕ್ಷಣವೇ ಈ ದಾಳಿಯನ್ನು ಹಿಮ್ಮೆಟ್ಟಿಸುತ್ತಿದ್ದೇವೆ. ಇಂಥ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಅಗತ್ಯ ಸೇನೆಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಅವರು ಪ್ರಧಾನಿ ಮನಮೋಹನ್ ಸಿಂಗ್ ಉದ್ದೇಶಿತ ಚೀನಾ ಭೇಟಿಗೂ ಮುನ್ನ ಅವರು ಸಿಎನ್‌ಎನ್‌ನೊಂದಿಗೆ ಮಾತನಾಡುತ್ತ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹಠಾತ್ ದಾಳಿ ಪ್ರಕರಣಗಳು ಹೆಚ್ಚಾಗಿವೆಯೇ ಎಂಬ ಪ್ರಶ್ನೆಗೆ, ಇದು ಅಪ್ರಸ್ತುತ, ಆದರೆ ತತ್‌ಕ್ಷಣಕ್ಕೆ ಇಂಥ ದಾಳಿಗಳು ಹೆಚ್ಚಳಗೊಂಡಿಲ್ಲ ಎಂದು ತಿಳಿಸಿದರು.
|