ಪಶ್ಚಿಮ ಬಂಗಾಲದ ಬಿರ್ಬುಮ್ ಜಿಲ್ಲೆಯ ಗ್ರಾಮವೊಂದರಲ್ಲಿ ಕನಿಷ್ಟ ಹತ್ತುಸಾವಿರ ಹಕ್ಕಿಗಳು ಸಾವಿಗೀಡಾಗಿದ್ದು, ಕೇವಲ ಒಂದೇ ಗ್ರಾಮದಲ್ಲಿ ಉಂಟಾದ ಹಕ್ಕಿಗಳ ಸಾವಿನಿಂದಾಗಿ ಭಾರತದಲ್ಲಿ ಹಕ್ಕಿ ಜ್ವರವು ಮತ್ತೊಮ್ಮೆ ಕಾಣಿಸಿಕೊಂಡಿವೆ.
ಪ್ರಯೋಗಾಲಯದ ವರದಿಗಳು ಇನ್ನೂ ಬಂದಿಲ್ಲದ ಕಾರಣ ಇದು ಎಚ್5ಎನ್1 ಸಂತತಿಯ ವೈರಸ್ ಇರಬಹುದೇ ಎಂಬುದಾಗಿ ಇನ್ನೂ ಸ್ಪಷ್ಟವಾಗಿಲ್ಲ ಎಂದು ರಾಜ್ಯ ವೈದ್ಯಕೀಯ ಪ್ರಾಧಿಕಾರವು ತಿಳಿಸಿವೆ.
ಪರಿಸ್ಥಿತಿಯನ್ನು ವಿಮರ್ಷಿಸಲು ಮತ್ತು ಸ್ಥಳೀಯರಿಗೆ ಸಲಹೆ ನೀಡುವ ಸಲುವಾಗಿ ಕೇಂದ್ರ ತಂಡವು ಈಗಾಗಲೇ ಸ್ಥಳಕ್ಕೆ ಆಗಮಿಸಿದೆ.
ನೆರೆಯ ಬಾಂಗ್ಲಾದೇಶದವು ಇನ್ನೂ ಹಕ್ಕಿ ಜ್ವರದ ಆಘಾತದಲ್ಲಿದ್ದು, ದೇಶದ 64ಜಿಲ್ಲೆಯಲ್ಲಿನ 21 ಜಿಲ್ಲೆಗಳು ಹಕ್ಕಿ ಜ್ವರದಿಂದ ನರಳುತ್ತಿವೆ.
|