ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಚೀನಾ ವ್ಯಾವಹಾರಿಕ ಅಡಚಣೆ ನಿವಾರಣೆಗೆ ಕ್ರಮ: ಸಿಂಗ್
ಹೆಚ್ಚು ಮಹತ್ವಾಕಾಂಕ್ಷೆಯ ದ್ವಿಪಕ್ಷೀಯ ವ್ಯಾವಹಾರಿಕ ಗುರಿ ಪ್ರಸ್ತಾಪಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಆಡಳಿತಾತ್ಮಕ ಅಡ್ಡಿ ನಿವಾರಣೆಗೆ ಮತ್ತು ಸೇವಾ ವಲಯದಲ್ಲಿ ವ್ಯವಹಾರ ವಿಸ್ತರಣೆಗಾಗಿ ನಿಬಂಧನೆಗಳನ್ನು ಸಡಿಲಗೊಳಿಸಲು ಭಾರತವು ಚೀನಾದ ಜೊತೆ ಶ್ರಮಿಸಲಿದೆ ಎಂದು ತಿಳಿಸಿದ್ದಾರೆ.

ಏಷ್ಯಾದ ಆರ್ಥಿಕ ಬಲವರ್ಧನೆ ಮತ್ತು ಏಕೀಕರಣಕ್ಕೆ ಶ್ರಮಿಸಿ ಅದರಿಂದ ಸೂಕ್ತ ಲಾಭ ದೊರೆಯುವಂತಾಗಲು ಉಭಯ ರಾಷ್ಟ್ರಗಳೂ ಕಾರ್ಯತತ್ಪರವಾಗಲಿವೆ ಎಂದು ಭಾರತ ಮತ್ತು ಚೀನಾ ಉದ್ಯಮಿಗಳು ಹಾಗೂ ವ್ಯವಹಾರೋದ್ಯಮಿಗಳ ಔದ್ಯಮಿಕ ಸಮಾವೇಶದಲ್ಲಿ ಸೋಮವಾರ ಮಾತನಾಡುತ್ತಿದ್ದ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನುಡಿದರು.

ನಮ್ಮ ಎರಡು ಆರ್ಥಿಕತೆಗಳು ಆರ್ಥಿಕ ಬೆಳವಣಿಗೆಯ ಎಂಜಿನ್‌ಗಳಂತಾಗುತ್ತಿವೆ. ನಾವು ನಮ್ಮ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು, ತಂತ್ರಜ್ಞಾನ ಮತ್ತು ಬಂಡವಾಳವನ್ನು ಈ ಪ್ರದೇಶದ ಸಮಾನ ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ ಎಂದು ಭಾರತ-ಚೀನಾ ಆರ್ಥಿಕ, ಔದ್ಯಮಿಕ ಮತ್ತು ಬಂಡವಾಳ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಚೀನಾ ಜತೆಗಿನ ದ್ವಿಪಕ್ಷೀಯ ವ್ಯವಹಾರವು ದುಪ್ಪಟ್ಟು ವೃದ್ಧಿಸಿದೆ ಎಂದು ತಿಳಿಸಿರುವ ತ್ರಿದಿನ ಚೀನಾ ಪ್ರವಾಸದಲ್ಲಿರುವ ಪ್ರಧಾನಿ ಸಿಂಗ್, 2008ರೊಳಗೆ 20 ಶತಕೋಟಿ ಡಾಲರ್ ವ್ಯಾವಹಾರಿಕ ಗುರಿಯನ್ನು ಎರಡು ವರ್ಷಗಳ ಮುನ್ನವೇ ಸಾಧಿಸಲಾಗಿದೆ. ಅಂತೆಯೇ 2010ರೊಳಗೆ ವ್ಯವಹಾರವು 40 ಶತಕೋಟಿ ಡಾಲರ್ ತಲುಪಬೇಕೆಂಬ ಪುನಾರಚಿತ ಗುರಿಯನ್ನೂ ಎರಡು ವರ್ಷ ಮುನ್ನವೇ ತಲುಪಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತಷ್ಟು
ಪಶ್ಚಿಮ ಬಂಗಾಲದಲ್ಲಿ ಹಕ್ಕಿಜ್ವರ
ಚೀನಾ ದಾಳಿ ಭೀತಿ ಇಲ್ಲ: ಪ್ರಣವ್
ಚೀನಾ ಭೇಟಿ:ಪ್ರಧಾನಿಗೆ ಅಭೂತಪೂರ್ವ ಸ್ವಾಗತ
ಆರೋಗ್ಯ ಸೇವೆಯಲ್ಲಿ ಭ್ರಷ್ಟತೆ: ತನಿಖೆಗೆ 4 ತಂಡ
ಆಡ್ವಾಣಿ ಕಣ್ಣೀರೇ ಜಮೀನ್ ಪರ್...!
ಅಪಾಯದ ಗುಂಡಿಯ ಅಗತ್ಯವಿಲ್ಲ: ಪ್ರಣವ್