ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದ ಜನತೆಗೆ ಸಂಕ್ರಾಂತಿ ಶುಭಾಶಯಗಳು
ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುವ ಮಕರಸಂಕ್ರಾಂತಿ ಮತ್ತು ಪೊಂಗಲ್ ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಮಂತ್ರಿ ಮನಮೋಹನ ಸಿಂಗ್ ರಾಷ್ಟ್ರದ ಜನತೆಗೆ ಶುಭಹಾರೈಸಿದ್ದಾರೆ. ಮಕರಸಂಕ್ರಾಂತಿ ಮತ್ತು ಪೊಂಗಲ್ ಹಬ್ಬಗಳ ಅಂಗವಾಗಿ, ರಾಷ್ಟ್ರದ ಜನತೆಗೆ ಸಂತೋಷ ಮತ್ತು ಸಮೃದ್ಧಿಯನ್ನು ಆಶಿಸುವುದಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂದೇಶದಲ್ಲಿ ತಿಳಿಸಿದ್ದಾರೆ.

ಮಕರಸಂಕ್ರಾಂತಿ ಮತ್ತು ಪೊಂಗಲ್ ಹಬ್ಬಗಳು ಪರಸ್ಪರರನ್ನು ಸೋದರತ್ವದ ಪ್ರೀತಿಯಲ್ಲಿ ಬಂಧಿಸಿ, ರಾಷ್ಟ್ರದ ಏಕತೆ, ಪ್ರಗತಿ ಮತ್ತು ಸಂಪದಭಿವೃದ್ಧಿಗೆ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಲಿ ಎಂದು ಅವರು ಹಾರೈಸಿದ್ದಾರೆ.

ಹಬ್ಬಗಳು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಪ್ರತೀಕವಾಗಿದೆ. ಈ ವರ್ಷದ ಮಕರ ಸಂಕ್ರಾಂತಿ ಮತ್ತು ಪೊಂಗಲ್ ನಮ್ಮೆಲ್ಲರ ಜೀವನದಲ್ಲಿ ಅದೃಷ್ಟ ಮತ್ತು ಸಂತೋಷ ಉಂಟುಮಾಡಲಿ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಹಾರೈಸಿದ್ದಾರೆ. ಮಕರಸಂಕ್ರಾಂತಿ ಹಬ್ಬದಲ್ಲಿ ವಿವಿಧ ವರ್ಣಗಳ ಗಾಳಿಪಟಗಳನ್ನು ಆಕಾಶದಲ್ಲಿ ಹಾರಿಬಿಡುವ ಮೂಲಕ ಆಚರಿಸಲಾಗುತ್ತದೆ.

ಉತ್ತರಪ್ರದೇಶದಲ್ಲಿ ಸಂಕ್ರಾಂತಿಗೆ ಕಿಚಿರಿ ಎಂದು ಕರೆಯುತ್ತಾರೆ. ಪವಿತ್ರ ನದಿಗಳಲ್ಲಿ ಅನೇಕ ಮಂದಿ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸುತ್ತಾರೆ. ದಕ್ಷಿಣ ಭಾಗಗಳಲ್ಲಿ ಪೊಂಗಲ್ ಎಂದು ಆಚರಿಸಲಾಗುವ ಈ ಹಬ್ಬವು ರೈತರಲ್ಲಿ ಜನಪ್ರಿಯವಾಗಿದೆ.

ತುಪ್ಪ ಮತ್ತು ಹಾಲಿನಲ್ಲಿ ಬೇಯಿಸಿದ ಅಕ್ಕಿ ಮತ್ತು ಬೇಳೆಕಾಳುಗಳ ಪೊಂಗಲ್ ತಿನಿಸನ್ನು ಕುಟುಂಬದ ದೇವರಿಗೆ ಅರ್ಪಿಸಲಾಗುತ್ತದೆ. ಪಂಜಾಬ್‌ನಲ್ಲಿ ಸಂಕ್ರಾಂತಿ ಅಂಗವಾಗಿ ಬೆಂಕಿಯ ಕುಂಡವನ್ನು ಹೊತ್ತಿಸಿ ಲೋಹ್ರಿ ಎಂದು ಆಚರಿಸಲಾಗುತ್ತದೆ. ಅಗ್ನಿಗೆ ಕಬ್ಬು ಮತ್ತು ಅಕ್ಕಿಯನ್ನು ಅರ್ಪಿಸಲಾಗುತ್ತದೆ.
ಮತ್ತಷ್ಟು
ತಹಬಂದಿಗೆ ಬಾರದ ಬುರ್ರಾಬಜಾರ್ ಬೆಂಕಿ
ಭಾರತ-ಚೀನಾ ವ್ಯಾವಹಾರಿಕ ಅಡಚಣೆ ನಿವಾರಣೆಗೆ ಕ್ರಮ: ಸಿಂಗ್
ಪಶ್ಚಿಮ ಬಂಗಾಲದಲ್ಲಿ ಹಕ್ಕಿಜ್ವರ
ಚೀನಾ ದಾಳಿ ಭೀತಿ ಇಲ್ಲ: ಪ್ರಣವ್
ಚೀನಾ ಭೇಟಿ:ಪ್ರಧಾನಿಗೆ ಅಭೂತಪೂರ್ವ ಸ್ವಾಗತ
ಆರೋಗ್ಯ ಸೇವೆಯಲ್ಲಿ ಭ್ರಷ್ಟತೆ: ತನಿಖೆಗೆ 4 ತಂಡ