ಮುಸ್ಲಿಂ ಸಂಪ್ರದಾಯದ ವಿರುದ್ಧ ಲೇಖನಗಳ ಮೂಲಕ ಮುಸ್ಲಿಮರ ಪ್ರತಿರೋಧ ಎದುರಿಸಿದ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಫ್ರಾನ್ಸಿನ ಪ್ರತಿಷ್ಠಿತ ಸೈಮನ್ ಡೇ ಬಿಯೊವಾಯೈರ್ ಮಹಿಳಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜನವರಿ 9ರಂದು ತಸ್ಲೀಮಾಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಖ್ಯಾತ ಫ್ರೆಂಚ್ ಲೇಖಕಿಯ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಯಿಂದ ತನಗೆ ಹೆಮ್ಮೆಯುಂಟಾಗಿದೆ ಎಂದು ತಸ್ಲಿಮಾ ಉದ್ಗರಿಸಿದ್ದಾರೆ
ಬಿಯೊವಾಯೈರ್ ಅವರ 100ನೆ ಜಯಂತಿ ಅಂಗವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬಾಂಗ್ಲಾದೇಶ ಮತ್ತು ಭಾರತದಲ್ಲಿ ಯಾತನೆಯ ಬದುಕನ್ನು ಕಂಡ ತಮಗೆ ಫ್ರಾನ್ಸಿನಲ್ಲಿ ಗೌರವಕ್ಕೆ ಪಾತ್ರಾವಾಗಿರುವುದು ನೆಮ್ಮದಿ ತಂದಿದೆ ಎಂದು ಅವರು ನುಡಿದರು.
ಸುರಕ್ಷತೆಯ ಕಾರಣಗಳಿಗಾಗಿ ಅಕ್ಷರಶಃ ಗೃಹಬಂಧನಕ್ಕೆ ಈಡಾಗಿರುವ ತಸ್ಲೀಮಾ ಅವರು ಪ್ರಶಸ್ತಿ ಸ್ವೀಕರಿಸಲು ಫ್ರಾನ್ಸ್‌ಗೆ ತೆರಳಿಲಿಲ್ಲ. ತನ್ನ ಸ್ತ್ರೀವಾದಿ ಚಿಂತನೆಗಳಿಗೆ ಹೆಸರುಪಡೆದ ಬಿಯೊವಾಯೈರ್ 1960ರಲ್ಲಿ ಬರೆದಿದ್ದ 'ಸೆಕೆಂಡ್ ಸೆಕ್ಸ್' ಚರ್ಚಾಸ್ಪದ ಕೃತಿಯಾಗಿತ್ತು.
|