ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕದ ಕಾರಣ ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವುದಿಲ್ಲ ಎಂದು ಆಸ್ಟ್ರೇಲಿಯಾ ಸರಕಾರ ತಿಳಿಸಿದೆ.ಈ ಮೊದಲು ಹೂವಾರ್ಡ್ ಸರಕಾರ ಭಾರತಕ್ಕೆ ಯುರೇನಿಯಂ ಮಾರಾಟ ಮಾಡುವುದಾಗಿ ತಿಳಿಸಿತ್ತು.
ಆಸ್ಟ್ರೇಲಿಯಾವು ಪರಮಾಣು ಪೂರೈಕೆದಾರರ ಗುಂಪಿನ ಮುಖ್ಯ ಸದಸ್ಯ ರಾಷ್ಟ್ರವಾಗಿದ್ದು, ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಇದರ ಬೆಂಬಲವು ವಿಮರ್ಷಾತ್ಮಕವಾಗಿದೆ.
ಆಸ್ಟ್ರೇಲಿಯಾದ ನಿರ್ಧಾರದ ಕುರಿತು ವಿದೇಶಾಂಗ ಸಚಿವ ಸ್ಟೀಪನ್ ಸ್ಮಿತ್ ಅವರು ಮುಂದಿನ ಬೆಳವಣಿಗೆವರೆಗೆ ಮಾತುಕತೆಯನ್ನು ತಡೆಹಿಡಿದಿರುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪರ್ತ್‌ನಲ್ಲಿ ನಡೆದ ಮಾತುಕತೆಯಲ್ಲಿ ಹೇಳಿದರು.
ಪ್ರಬಲ ನಿಯಮ ಬದ್ಧತೆಯೊಂದಿಗೆ ನಾವು ಚುನಾವಣೆಗೆ ತೆರಳಿದ್ದೆವು. ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದದ ಸದಸ್ಯರಲ್ಲದ ರಾಷ್ಟ್ರಗಳಿಗೆ ನಾವು ಯುರೇನಿಯಂ ರಫ್ತು ಮಾಡುವುದಿಲ್ಲ ಎಂದು ಸಭೆಯ ನಂತರ ಸುದ್ದಿಗಾರರೊಂದಿಗೆ ಹೇಳಿದರು.
ಜಾನ್ ಹೂವರ್ಡ್ ಅವರ ಸಂಪ್ರದಾಯವಾದಿ ಸರಕಾರವು ಆಗಸ್ಟ್ 2007ರಲ್ಲಿ ಪರಮಾಣು ಮಾರಾಟವನ್ನು ಪ್ರಾರಂಭಿಸಲು ನಿರ್ಧರಿಸಿತ್ತು ಆದರೆ ನವೆಂಬರ್‌ನಲ್ಲಿ ಹೂವಾರ್ಡ್ ಸರಕಾರ ಅಧಿಕಾರ ಕಳೆದುಕೊಂಡಿತು.
|