ನ್ಯೂ ಜಲ್ಪೈಗುರಿ ಬಳಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿ ಆ ವಿಭಾಗದ ರೈಲುಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸಾವು, ನೋವು ಸಂಭವಿಸಿದ ವರದಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ನ್ಯೂ ಜಲ್ಪೈಗುರಿಗೆ 50 ಕಿಮೀ ದೂರದಲ್ಲಿ ಮಜೂರ್‌ಗನ್ ಮತ್ತು ಅಲುವಬಾರಿ ರೈಲ್ವೆ ನಿಲ್ದಾಣಗಳ ನಡುವೆ ದಿಬ್ರುಗಡ್-ಅಮೃತಸರ ಎಕ್ಸ್‌ಪ್ರೆಸ್ ರೈಲಿನಲ್ಲಿ ಎರಡು ಕಾದಿರಿಸಿರದ ಸಾಮಾನ್ಯ ವರ್ಗದ ರೈಲು ಬೋಗಿಗಳು ಸೇರಿದಂತೆ ಮೂರು ಬೋಗಿಗಳು ಬೆಳಿಗ್ಗೆ 6.23ಕ್ಕೆ ಹಳಿತಪ್ಪಿದವೆಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಹಳಿತಪ್ಪಿದ ರೈಲುಬೋಗಿಗಳನ್ನು ಎತ್ತಲು ಆ ಸ್ಥಳಕ್ಕೆ ಕ್ರೇನ್ ಕಳಿಸಲಾಗಿದೆ ಎಂದು ಅವರು ತಿಳಿಸಿದ್ದು, ಸಹಾಯಕ ನಿರ್ವಹಣೆ ಮ್ಯಾನೇಜರ್ ಆರ್.ಕೆ. ಜಾ ಸ್ಥಳಕ್ಕೆ ಧಾವಿಸಿದ್ದಾರೆ.
|