ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಹಾರ್ ದುರಂತ: ದೆಹಲಿ ಹೈಕೋರ್ಟ್‌ಗೆ ಮೊರೆ
ಉಪಹಾರ್ ಸಿನೆಮಾ ಮಂದಿರ ಅಗ್ನಿ ದುರಂತದ ಪ್ರಕರಣದಲ್ಲಿ 7 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಮಾಜಿ ಮ್ಯಾನೇಜರ್‌ಗಳು ಮಂಗಳವಾರ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ನ್ಯಾಯಮೂರ್ತಿ ಎಚ್.ಆರ್. ಮಲ್ಹೋತ್ರಾ, ಸಿಬಿಐಗೆ ಈ ಕುರಿತು ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ಉಪಹಾರ್ ಸಿನೆಮಾ ಮಂದಿರದಲ್ಲಿ ಬಾರ್ಡರ್ ಹಿಂದಿ ಚಿತ್ರ ಪ್ರದರ್ಶಿಸುತ್ತಿದ್ದ ವೇಳೆ ಅಗ್ನಿದುರಂತ ಸಂಭವಿಸಿ 59 ಮಂದಿ ಪ್ರೇಕ್ಷಕರು ಉಸಿರುಕಟ್ಟಿ ಸತ್ತಿದ್ದರು. ಭಾರತೀಯ ದಂಡಸಂಹಿತೆಯ ವಿವಿಧ ನಿಯಮಗಳಡಿ ಎಲ್ಲ ಆರೋಪಿಗಳನ್ನು ವಿಚಾರಣೆ ನ್ಯಾಯಾಲಯ ತಪ್ಪಿತಸ್ಥರನ್ನಾಗಿಸಿತ್ತು.

ಪ್ರಸಕ್ತ ತಿಹಾರ್ ಜೈಲಿನಲ್ಲಿರುವ ರಾಧಾ ಕೃಷ್ಣ ಶರ್ಮ ಮತ್ತು ನಿರ್ಮಲ್ ಚೋಪ್ರಾ ಸಲ್ಲಿಸಿದ ಮೇಲ್ಮನವಿಯಲ್ಲಿ ತಮ್ಮ ವಿರುದ್ಧವಿರುವ ಸಾಕ್ಷ್ಯವನ್ನು ಗ್ರಹಿಸಲು ವಿಚಾರಣೆ ನ್ಯಾಯಾಲಯ ವಿಫಲವಾಗಿದೆ ಎಂದು ತಿಳಿಸಿ ತಮಗೆ ನೀಡಿದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದಾರೆ.

ತಮ್ಮ ಕಕ್ಷಿದಾರ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಶರ್ಮಾ ವಕೀಲರು ಕೋರ್ಟ್‌ಗೆ ತಿಳಿಸಿದ ಬಳಿಕ ಮುಂದಿನ ವಿಚಾರಣೆ ಸಂದರ್ಭದಲ್ಲಿ ಅವರ ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸುವಂತೆ ಕೋರ್ಟ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ.
ಮತ್ತಷ್ಟು
ಹಳಿತಪ್ಪಿದ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು
ಭಾರತಕ್ಕೆ ಯುರೇನಿಯಂ ಮಾರಾಟ ಇಲ್ಲ:ಅಸ್ಟ್ರೇಲಿಯಾ
ತಸ್ಲೀಮಾ ನಸ್ರೀನ್‌ಗೆ ಫ್ರೆಂಚ್ ಪ್ರಶಸ್ತಿ
ಮೋದಿಗೆ ಚೆನ್ನೈನಲ್ಲಿ ತಲೆಬುರುಡೆಗಳ ಸ್ವಾಗತ
ರಾಷ್ಟ್ರದ ಜನತೆಗೆ ಸಂಕ್ರಾಂತಿ ಶುಭಾಶಯಗಳು
ತಹಬಂದಿಗೆ ಬಾರದ ಬುರ್ರಾಬಜಾರ್ ಬೆಂಕಿ