ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಲ್ಲಿಕಟ್ಟು ಆಚರಣೆಗೆ ಸುಪ್ರೀಂಕೋರ್ಟ್ ಅನುಮತಿ
ಕೇವಲ ಮೂರು ದಿನಗಳ ಹಿಂದೆ ಗೂಳಿಗಳನ್ನು ಮಣಿಸುವ ಜಲ್ಲಿಕಟ್ಟು ಆಚರಣೆ ಅಮಾನವೀಯವೆಂದು ಹೇಳಿ ಅದಕ್ಕೆ ಅನುಮತಿ ನಿರಾಕರಿಸಿದ್ದ ಸುಪ್ರೀಂಕೋರ್ಟ್, ಪ್ರಾಣಿ ದಯಾ ಮಂಡಳಿಯ ಕಠಿಣ ನಿಗಾದಲ್ಲಿ ಕ್ರೀಡೆಯನ್ನು ನಡೆಸಲು ಮಂಗಳವಾರ ಅನುಮತಿ ನೀಡಿದೆ. ಕಳೆದ ವಾರ ಜಲ್ಲಿಕಟ್ಟು ಸಾಂಪ್ರದಾಯಿಕ ಆಚರಣೆಗೆ ನಿಷೇಧ ವಿಧಿಸಿ ಸುಪ್ರೀಕೋರ್ಟ್ ಆದೇಶ ಹೊರಡಿಸಿತ್ತು.

ಆದರೆ ತಮಿಳುನಾಡು ಸರ್ಕಾರ ಪರಾಮರ್ಶೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ ತನ್ನ ನಿಲುವನ್ನು ಮೃದುಗೊಳಿಸಿದೆ. ಸುಪ್ರೀಂಕೋರ್ಟ್ ನಿಷೇಧದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ವ್ಯಕ್ತವಾಗಿದ್ದರಿಂದ ಜಲ್ಲಿಕಟ್ಟುಆಚರಣೆಯಲ್ಲಿ ಪ್ರಾಣಿಗಳು ಮತ್ತು ಪ್ರೇಕ್ಷಕರ ಸುರಕ್ಷತೆಗೆ ಗಮನನೀಡುವುದಾಗಿ ಸರ್ಕಾರ ತನ್ನ ಅರ್ಜಿಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಈ ಕ್ರೀಡೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ.

ಕೋರ್ಟ್ ಆದೇಶದ ಪ್ರಕಾರ ಗೂಳಿಗಳಿಗೆ ಯಾವುದೇ ರೀತಿಯ ಹಿಂಸೆ ನೀಡಬಾರದು, ಪ್ರೇಕ್ಷಕರು ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ನಡುವೆ ಅಡ್ಡಗಡ್ಡೆಗಳನ್ನು ಹಾಕಿ ಪ್ರತ್ಯೇಕಿಸಬೇಕು ಮತ್ತು ಸ್ಥಳದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧವಾಗಿಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಾಣಿ ದಯಾ ಮಂಡಳಿ ಅಧಿಕಾರಿಗಳ ಹದ್ದಿನ ಕಣ್ಣುಗಳ ಅಡಿಯಲ್ಲಿ ಜಲ್ಲಿಕಟ್ಟಿನ ಎಲ್ಲ ವಿದ್ಯಮಾನಗಳ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದೂ ಕೋರ್ಟ್ ಆದೇಶಿಸಿದೆ. ಜಲ್ಲಿಕಟ್ಟುವಿಗೆ ಕೋರ್ಟ್ ಅನುಮತಿ ನೀಡಿದ ಸುದ್ದಿ ಕೇಳಿ ಅಲಂಗನಲ್ಲೂರಿನಲ್ಲಿ ವಿಜೃಂಭಣೆಯ ವಾತಾವರಣ ಕಂಡುಬಂತು. ಜಲ್ಲಿಕಟ್ಟು 400 ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ನಿಷೇಧ ತೆಗೆದುಹಾಕಿದ್ದು ಒಳ್ಳೆಯ ನಿರ್ಧಾರ.

ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಸ್ಥಳೀಯರು ಹೇಳಿದ್ದಾರೆ. ಆದರೆ ಪ್ರಾಣಿ ದಯಾ ಕಾರ್ಯಕರ್ತರಿಗೆ ನಿರಾಶೆಯಾಗಿದೆ. ಪ್ರಾಣಿಗಳಿಗೆ ಹಿಂಸೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎಂದು ಹೇಳಿದ್ದು, ಇದೊಂದು ತಾತ್ಕಾಲಿಕ ಹಿನ್ನಡೆಯೆಂದು ಅವರು ಭಾವಿಸಿದ್ದಾರೆ.ಕಳೆದ 20 ವರ್ಷಗಳಿಂದ ಸುಮಾರು 200 ಜನರು ಜಲ್ಲಿಕಟ್ಟು ಆಚರಣೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಜಲ್ಲಿಕಟ್ಟು ಆಚರಣೆಯನ್ನು ಸುರಕ್ಷಿತವಾಗಿ ನಡೆಸುವುದಾಗಿ ಸರ್ಕಾರ ಹೇಳಿದ್ದರೂ ರಾಜ್ಯದ ಸಾವಿರಾರು ಗೂಳಿಗಳಿಗೆ ಮಾತ್ರ ಆಘಾತಕಾರಿಯಾಗಿದೆ.
ಮತ್ತಷ್ಟು
ಉಪಹಾರ್ ದುರಂತ: ದೆಹಲಿ ಹೈಕೋರ್ಟ್‌ಗೆ ಮೊರೆ
ಹಳಿತಪ್ಪಿದ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು
ಭಾರತಕ್ಕೆ ಯುರೇನಿಯಂ ಮಾರಾಟ ಇಲ್ಲ:ಅಸ್ಟ್ರೇಲಿಯಾ
ತಸ್ಲೀಮಾ ನಸ್ರೀನ್‌ಗೆ ಫ್ರೆಂಚ್ ಪ್ರಶಸ್ತಿ
ಮೋದಿಗೆ ಚೆನ್ನೈನಲ್ಲಿ ತಲೆಬುರುಡೆಗಳ ಸ್ವಾಗತ
ರಾಷ್ಟ್ರದ ಜನತೆಗೆ ಸಂಕ್ರಾಂತಿ ಶುಭಾಶಯಗಳು