ಶಾಂತಿ, ಅಹಿಂಸೆಯ ಮಂತ್ರದಿಂದ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧಿ ಕಣ್ಮರೆಯಾಗಿದ್ದರೂ, ಗಾಂಧಿ ಅವರ ಉಡುಪು ಮತ್ತು ನಡವಳಿಕೆಯಲ್ಲದೇ ಅವರ ತತ್ವವನ್ನೂ ಅನುಸರಿಸುವ ವಿದೇಶಿಯರೊಬ್ಬರು ಇಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ವಾಷಿಂಗ್ಟನ್ ಒಲಂಪಿಯಾಗೆ ಸೇರಿರುವ 70 ವರ್ಷ ವಯಸ್ಸಿನ ಮೆರ್ನೀ ಮೆಯರ್ ಮಹಾತ್ಮ ಗಾಂಧಿಯ ಸತ್ಯ, ಅಹಿಂಸೆಯ ಪ್ರತೀಕವೆನಿಸಿದ್ದಾರೆ.
ಖಾದಿ ಉಡುಪು, ಉರುಗೋಲು ಮತ್ತು ಗಾಂಧಿ ರೀತಿಯ ಕನ್ನಡಕ ಧರಿಸಿದ ಮೆಯೆರ್ ಅವರು ಥೇಟ್ ಗಾಂಧಿಯನ್ನೇ ಹೋಲುತ್ತಾರೆ. ಶಾಂತಿ ಕಾರ್ಯಕರ್ತರಾಗಿ ಭಾರತಕ್ಕೆ ಆಗಮಿಸಿರುವ ಮೆಯೆರ್ ಚಂದೀಗಢದಲ್ಲಿದ್ದು, ವಿವಿಧ ಶಾಲೆ, ಕಾಲೇಜುಗಳ ಯುವಕರನ್ನು ಭೇಟಿ ಮಾಡಿ ಗಾಂಧಿಯ ಅಹಿಂಸಾ ಸಂದೇಶವನ್ನು ಬಿತ್ತರಿಸಿದ್ದಾರೆ.
ತತ್ವಶಾಸ್ತ್ರ, ಇತಿಹಾಸ ಮತ್ತು ಸಾಮಾಜಿಕ ಪರಿವರ್ತನೆಯ ಪದವಿಗಳನ್ನು ಹೊಂದಿರುವ ಅವರು, ಮಾನವನ ಹಿಂಸೆಯ ಮೂಲವನ್ನು ಅಧ್ಯಯನ ಮಾಡುತ್ತಿದ್ದು, ಕೊಲ್ಲಿ ಯುದ್ಧ ಆರಂಭವಾದಾಗಿನಿಂದ ಅಹಿಂಸೆಯನ್ನು ನಂಬಿಕೆಯಾಗಿ ಸ್ವೀಕರಿಸುವಂತೆ ತರಬೇತಿ ನೀಡುತ್ತಿದ್ದಾರೆ.
|