ಗೋವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರ್ನೆಮ್ ತಾಲೂಕಿನ ಬಳಿ ಆಸಿಡ್ ಒಯ್ಯುತ್ತಿದ್ದ ಟ್ಯಾಂಕರ್ ಸ್ಫೋಟಿಸಿ ಸಮೀಪದಲ್ಲೇ ತೆರಳುತ್ತಿದ್ದ ಬಸ್ಸಿಗೆ ಬೆಂಕಿ ಆವರಿಸಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಬುಧವಾರ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಟ್ರಕ್ಕೊಂದು ಕೂಡ ಒಳಗೊಂಡಿದೆ.
ಟ್ಯಾಂಕರ್‌ನಲ್ಲಿ ಆಸಿಡ್ ಸೋರಿಕೆಯಾದ ಕೂಡ ಬೆಂಕಿ ಹೊತ್ತಿಕೊಂಡಿತೆಂದು ತಿಳಿದುಬಂದಿದೆ. ಸಮೀಪದಲ್ಲೇ ಬಸ್ ಮತ್ತು ಟ್ರಕ್ ತೆರಳುತ್ತಿದ್ದಾಗ ಟ್ಯಾಂಕರ್ ಸ್ಫೋಟ ಸಂಭವಿಸಿ ಬೆಂಕಿಯ ಜ್ವಾಲೆಗಳು ಬಸ್ ಮತ್ತು ಟ್ರಕ್‌ಗಳಿಗೆ ಕೂಡ ಆವರಿಸಿತು.
11 ಜನರು ಸ್ಥಳದಲ್ಲೇ ಸತ್ತಿದ್ದು, ಸತ್ತವರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಗಾಯಾಳುಗಳನ್ನು ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ.
|