ಜಲ್ಲುಕಟ್ಟು ಮೇಲಿನ ನಿಷೇಧವನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದ ಬಳಿಕ ಪಲಮೇಡುವಿನಲ್ಲಿ ಬಿಗಿ ಭದ್ರತೆ ಮತ್ತು ಉನ್ನತ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಯಿತು. ಸುಪ್ರೀಂಕೋರ್ಟ್ ಷರತ್ತಿನ ಅನ್ವಯ ಜಿಲ್ಲಾಧಿಕಾರಿ ಎಸ್.ಎಸ್. ಜವಾಹರ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಪಿ. ಅನ್ಬು ಸ್ಥಳದಲ್ಲಿ ಹಾಜರಿದ್ದರು,
ಪ್ರಾಣಿ ದಯಾ ಮಂಡಳಿ ಅಧಿಕಾರಿಗಳು ಕೂಡ ಸ್ಥಳದಲ್ಲಿ ಹಾಜರಿದ್ದರು. ಈ ಉತ್ಸವದಲ್ಲಿ 500 ಗೂಳಿಗಳು ಮತ್ತು 350 ಪುರುಷರು ಭಾಗವಹಿಸಲಿದ್ದಾರೆ. ಪಶುವೈದ್ಯರಿಂದ ಎಲ್ಲ ಗೂಳಿಗಳನ್ನು ಕ್ರೀಡೆಗೆ ಮುಂಚೆಯ ಪರೀಕ್ಷೆಗೆ ಒಳಪಡಿಸಲಾಯಿತು. ಜಲ್ಲಿಕಟ್ಟು ಭಾಗಿಗಳಿಗೆ ಕೂಡ ವೈದ್ಯಕೀಯ ಪರೀಕ್ಷೆ ಮಾಡಲಾಯಿತು.
ಅವರು ಯಾವುದೇ ಮಾರಕಾಸ್ತ್ರ ಒಯ್ಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಮಧುರೈ, ಥೇನಿ, ದಿಂಡಿಗಲ್, ಶಿವಗಂಗೈ, ವಿರುದಾನಗರ ಮತ್ತು ರಾಮನಾಥಪುರಂನಿಂದ ವಿಶೇಷವಾಗಿ ಸಜ್ಜುಗೊಳಿಸಿದ 500 ಗೂಳಿಗಳನ್ನು ಕರೆತರಲಾಗಿತ್ತು. ಪ್ರೇಕ್ಷಕರು ಭಾಗವಹಿಸುವವರ ಜತೆ ಬೆರೆಯದಂತೆ ಅಡ್ಡಗಟ್ಟೆಗಳ ಮೂಲಕ ಪ್ರತ್ಯೇಕಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಲ್ಲಿಕಟ್ಟುವನ್ನು ಬೆಳೆಉತ್ಸವದ ಅಂಗವಾಗಿ ರಾಜ್ಯದಲ್ಲಿ ಆಯೋಜಿಸಲಾಗಿದೆ.
|