ದಿಗಂಬರ್ ಕಾಮತ್ ಮುಂದಾಳತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್‌ಸಿಪಿ ಹಿಂದಕ್ಕೆ ಪಡೆದುಕೊಂಡಿದ್ದು, ಏಳು ತಿಂಗಳುಗಳ ಕಾಂಗ್ರೆಸ್ ನೇತೃತ್ವದ ಗೋವಾ ಸರಕಾರ ಈಗ ಪತನದ ಹಂತದಲ್ಲಿದೆ.
ಪಕ್ಷೇತರ ಶಾಸಕ ವಿಶ್ವಜೀತ್ ರಾಣೆ, ಮಿಕ್ಕೀ ಪ್ಯಾಚಿಕೋ, ಜೋಸ್ ಫಿಲಿಪ್ಸ್ ಡಿಸೋಜಾ ಸೇರಿದಂತೆ ಒಟ್ಟು ಮೂರು ಸಚಿವರು ರಾಜೀನಾಮೆ ನೀಡಿದ್ದಾರೆ.
40 ಸದಸ್ಯಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿ ಸರಕಾರದ 19 ಸದಸ್ಯರನ್ನು ಹೊಂದಿದೆ.
ರಾಜ್ಯದ ಜನತೆಯ ಇಚ್ಛೆಯಂತೆ ಸರಕಾರವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸಚಿವರು ರಾಜೀನಾಮೆ ನೀಡುತ್ತಿದ್ದಾರೆ.
ಕೆಲವು ಶಾಸಕರು ಬೆಂಬಲವನ್ನು ಹಿಂತೆಗೆಯುವುದಾಗಿ ಬೆರಿಕೆಯೊಡ್ಡಿದ್ದಾಗ ಈ ಬಿಕ್ಕಟ್ಟು ಉಂಟಾಗಿದೆ. ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿಯ ಮಗನಾದ ಪಕ್ಷೇತರ ಶಾಸಕ ವಿಶ್ವಜೀತ್ ರಾಣೆ ಬಂಡಾಯದ ಹಿಂದಿದ್ದಾರೆ.
|