ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಸೇರಿದಂತೆ ಅತೀ ಗಣ್ಯವ್ಯಕ್ತಿಗಳ ಮೇಲೆ ಪಾಕಿಸ್ತಾನದ ಮೂಲದ ಉಗ್ರಗಾಮಿ ತಂಡವೊಂದು ದಾಳಿ ಮಾಡುವ ಸಂಭವನೀಯತೆ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.
ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಸೇರಿದಂತೆ ಗಣ್ಯವ್ಯಕ್ತಿಗಳ ಭದ್ರತೆಯ ಉಸ್ತುವಾರಿ ವಹಿಸಿರುವ ವಿಶೇಷ ಭದ್ರತಾ ಕಾವಲು ದಳಕ್ಕೆ ಕಠಿಣ ತರಬೇತಿಗೆ ಒಳಪಡುವಂತೆ ಆದೇಶ ನೀಡಲಾಗಿದೆ.
ಪಾಕಿಸ್ತಾನ ಮೂಲದ ಲಷ್ಕರೆ ತೈಬಾ ಮತ್ತು ಜೈಷೆ ಮೊಹಮದ್ ಅಜಾದ್ ಮತ್ತು ಅಬ್ದುಲ್ಲಾ ಜೂನಿಯರ್ ಮೇಲೆ ಆತ್ಮಾಹುತಿ ದಾಳಿ ಮಾಡಬಹುದೆಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ.ಪ್ರಮುಖ ಎನ್‌ಎಸ್‌ಜಿ ಕಮಾಂಡೊಗಳ ರಕ್ಷಣೆಯ ಜತೆಗೆ ಅಜಾದ್ ಭದ್ರತೆಯಲ್ಲಿ ಪ್ರಸಕ್ತ ಎಸ್ಎಸ್‌ಜಿಯನ್ನು ಬದಲಿಸಿ ಯುದ್ಧದ ತರಬೇತಿಯಲ್ಲಿ ನಿಪುಣರಾದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
|