ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರೋಪವಿದ್ದರೂ ಭಲ್ಲಾಗೆ ಬಡ್ತಿ ನೀಡಿದ ರಾಷ್ಟ್ರಪತಿ
ಭೂಹಗರಣದಲ್ಲಿ ನ್ಯಾಯಮೂರ್ತಿ ಜಗದೀಶ್ ಭಲ್ಲಾ ವಿರುದ್ಧ ಆರೋಪವಿದ್ದರೂ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹಿಮಾಚಲ ಪ್ರದೇಶದ ಮುಖ್ಯನ್ಯಾಯಮೂರ್ತಿಯಾಗಿ ಭಲ್ಲಾ ಅವರ ಬಡ್ತಿಗೆ ಬುಧವಾರ ಅಂಗೀಕಾರದ ಮುದ್ರೆ ಒತ್ತುವ ಮೂಲಕ ವಿವಾದಕ್ಕೆ ಎಡೆ ಕಲ್ಪಿಸಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಜಗದೀಶ್ ಭಲ್ಲಾ ಬಡ್ತಿಯನ್ನು ನಿರಾಕರಿಸಿ ಕಡತವನ್ನು ಸರ್ಕಾರಕ್ಕೆ ಹಿಂದೆ ಕಳಿಸಿದ ಐದು ತಿಂಗಳಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಮೂರ್ತಿ ಭಲ್ಲಾ ಅವರ ಕುಟುಂಬ ಕೋಟ್ಯಂತರ ರೂ. ಮೌಲ್ಯದ ಭೂ ಹಗರಣದಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಲಾಂ ಅವರು ಭಲ್ಲಾ ಬಡ್ತಿಯನ್ನು ನಿರಾಕರಿಸಿ ಕಡತವನ್ನು ಹಿಂದಕ್ಕೆ ಕಳಿಸಿದ್ದರು.ಭಲ್ಲಾ ಪತ್ನಿ ರೇಣು ನೊಯ್ಡಾದಲ್ಲಿ 7.20 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 5 ಲಕ್ಷ ರೂ.ಗೆ ಖರೀದಿಸಿದ್ದಾರೆಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವರದಿಯನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು.

ಆದರೆ ಸುಪ್ರೀಂಕೋರ್ಟ್ ಸಮಿತಿಯು ಇದನ್ನು ಕಡೆಗಣಿಸಿ, ಕೇರಳ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಗೆ ನ್ಯಾಯಮೂರ್ತಿ ಭಲ್ಲಾ ಅವರನ್ನು ಶಿಫಾರಸು ಮಾಡಿತ್ತು. ಆದರೆ ಮುಂಚಿನ ರಾಷ್ಟ್ರಪತಿ ಕಲಾಂ ಅದಕ್ಕೆ ಅನುಮೋದನೆ ನೀಡಲು ನಿರಾಕರಿಸಿ ಕಡತವನ್ನು ಸರ್ಕಾರಕ್ಕೆ ವಾಪಸು ಕಳಿಸಿತ್ತು.
ಮತ್ತಷ್ಟು
ಕಾಶ್ಮೀರ: ಉಗ್ರರ ದಾಳಿ ವಿರುದ್ಧ ಬಿಗಿ ಭದ್ರತೆ
ಗೋವಾ ಬಿಕ್ಕಟ್ಟು:ಬೆಂಬಲ ಹಿಂತೆಗೆದ ಎನ್‌ಸಿಪಿ
ಪಲಮೇಡುವಿನಲ್ಲಿ ಬಿಗಿಭದ್ರತೆಯಲ್ಲಿ ಜಲ್ಲಿಕಟ್ಟು
ಟ್ಯಾಂಕರ್ ಸ್ಫೋಟ, ಬಸ್ಸಿಗೆ ಬೆಂಕಿ: 11 ಸಾವು
ಸೋನಿಯಾಗಿಂತ ನಾನು ಮಿಗಿಲು: ಮಾಯಾವತಿ
ಹಕ್ಕಿ ಜ್ವರ: ಕೋಳಿಗಳ ಮಾರಣಹೋಮ