ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಲ್ಲಿಕಟ್ಟು ಆಟದಲ್ಲಿ 129 ಜನರಿಗೆ ಗಾಯ
ಗೂಳಿಗಳನ್ನು ಪಳಗಿಸುವ ಸಾಂಪ್ರದಾಯಿಕ ಕ್ರೀಡೆ ಬುಧವಾರ ಎರಡು ಸ್ಥಳಗಳಲ್ಲಿ ಜರುಗಿದ್ದು, ಗೂಳಿಗಳ ದಾಂಧಲೆಗೆ ಸಿಕ್ಕಿ ಕನಿಷ್ಠ 129 ಜನರು ಗಾಯಗೊಂಡಿದ್ದಾರೆ. ಈ ಆಟವು ನೂರಾರು ಸ್ಪರ್ಧಿಗಳನ್ನು ಮತ್ತು ಪ್ರೇಕ್ಷಕರನ್ನು ನೆರೆಯ ಜಿಲ್ಲೆಗಳಿಂದಲೂ ಆಕರ್ಷಿಸಿತ್ತು. ಗೂಳಿಗಳ ಡುಬ್ಬವನ್ನು ಹಿಡಿದು ಮಣಿಸಲು ಅವಕಾಶ ನೀಡಿದ 350 ಸ್ಪರ್ಧಿಗಳಲ್ಲಿ 80 ಜನರು ಗಾಯಗೊಂಡಿದ್ದು, ಅವರಲ್ಲಿ 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೂಳಿಗಳನ್ನು ಮಣಿಸುವ ಕ್ರಿಯೆಯಲ್ಲಿ ಅವುಗಳ ತಿವಿತದಿಂದ ಅಥವಾ ಗೂಳಿಗಳ ಸೆಣೆಸಾಟಕ್ಕೆ ಆಯತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಇಂದಿನ ಕ್ರೀಡೆಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.

ಪ್ರತಿವರ್ಷ ಗೂಳಿಯನ್ನು ಪಳಗಿಸುವ ಕ್ರಿಯೆಯಲ್ಲಿ ಅನೇಕ ಮಂದಿ ಅಸುನೀಗಿದ್ದರು ಮತ್ತು ಗಾಯಗೊಂಡಿದ್ದರು. ಈ ಬಾರಿ 500 ಗೂಳಿಗಳು ಮತ್ತು 350 ಜನರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯವಾದ ಜಲ್ಲಿಕಟ್ಟು ಆಚರಣೆಯು ಇಲ್ಲಿನ ಅಲಂಗನಲ್ಲೂರಿನಲ್ಲಿ ಶುಕ್ರವಾರ ನಡೆಯಲಿದ್ದು, ವಿದೇಶಿ ಪ್ರವಾಸಿಗಳು ಕೂಡ ಬರುವರೆಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
ವರದಿ ಸಲ್ಲಿಕೆಗೆ ಸಿಬಿಐಗೆ ಕಾಲಾವಕಾಶ
ಆರೋಪವಿದ್ದರೂ ಭಲ್ಲಾಗೆ ಬಡ್ತಿ ನೀಡಿದ ರಾಷ್ಟ್ರಪತಿ
ಕಾಶ್ಮೀರ: ಉಗ್ರರ ದಾಳಿ ವಿರುದ್ಧ ಬಿಗಿ ಭದ್ರತೆ
ಗೋವಾ ಬಿಕ್ಕಟ್ಟು:ಬೆಂಬಲ ಹಿಂತೆಗೆದ ಎನ್‌ಸಿಪಿ
ಪಲಮೇಡುವಿನಲ್ಲಿ ಬಿಗಿಭದ್ರತೆಯಲ್ಲಿ ಜಲ್ಲಿಕಟ್ಟು
ಟ್ಯಾಂಕರ್ ಸ್ಫೋಟ, ಬಸ್ಸಿಗೆ ಬೆಂಕಿ: 11 ಸಾವು