ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಕಲಚೇತನರಿಗೆ ಖಾಸಗಿ ಉದ್ಯೋಗಕ್ಕೆ ಅಸ್ತು
ರಾಜ್ಯ ವಲಯದಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿರುವ ನಡುವೆ ಖಾಸಗಿ ಕ್ಷೇತ್ರಗಳಲ್ಲಿ ವಾರ್ಷಿಕ 1,00,000 ವಿಕಲಚೇತನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪ್ರೋತ್ಸಾಹಧನ ನೀಡುವ ಮೂಲಕ 1,800 ಕೋಟಿ ರೂ. ಮೌಲ್ಯದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ನೌಕರರ ಭವಿಷ್ಯನಿಧಿ ಮತ್ತು ರಾಜ್ಯ ವಿಮೆಗೆ ಸರ್ಕಾರ ಕೊಡುಗೆ ನೀಡುವ ಮೂಲಕ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡಿತು.

11ನೇ ಯೋಜನೆಯಲ್ಲಿ ಸರ್ಕಾರದ ಯೋಜನಾ ವೆಚ್ಚವಾದ 1800 ಕೋಟಿ ರೂ.ಗಳನ್ನು ಐತಿಹಾಸಿಕ ನಿರ್ಧಾರ ಒಳಗೊಂಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಸಿಸಿಇಎ ಸಭೆಯ ಬಳಿಕ ವರದಿಗಾರರಿಗೆ ತಿಳಿಸಿದರು. ಸರ್ಕಾರದಲ್ಲಿ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ.

ಆದ್ದರಿಂದ ಮಾಲೀಕರಿಗೆ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಅವರು ನುಡಿದರು.
ಮತ್ತಷ್ಟು
ಜಲ್ಲಿಕಟ್ಟು ಆಟದಲ್ಲಿ 129 ಜನರಿಗೆ ಗಾಯ
ವರದಿ ಸಲ್ಲಿಕೆಗೆ ಸಿಬಿಐಗೆ ಕಾಲಾವಕಾಶ
ಆರೋಪವಿದ್ದರೂ ಭಲ್ಲಾಗೆ ಬಡ್ತಿ ನೀಡಿದ ರಾಷ್ಟ್ರಪತಿ
ಕಾಶ್ಮೀರ: ಉಗ್ರರ ದಾಳಿ ವಿರುದ್ಧ ಬಿಗಿ ಭದ್ರತೆ
ಗೋವಾ ಬಿಕ್ಕಟ್ಟು:ಬೆಂಬಲ ಹಿಂತೆಗೆದ ಎನ್‌ಸಿಪಿ
ಪಲಮೇಡುವಿನಲ್ಲಿ ಬಿಗಿಭದ್ರತೆಯಲ್ಲಿ ಜಲ್ಲಿಕಟ್ಟು