ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಸ್ತ್ರಚಿಕಿತ್ಸೆಗೆ ರೋಗಿಯ ಅನುಮತಿ: ಸುಪ್ರೀಂಕೋರ್ಟ್
PTI
ಖಾಸಗಿ ವೈದ್ಯಕೀಯ ಸೇವೆ ರಾಷ್ಟ್ರದಲ್ಲಿ ವಾಣಿಜ್ಯೀಕರಣ ಆಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. ರೋಗಿಯ ಜೀವವುಳಿಸುವುದನ್ನು ಹೊರತುಪಡಿಸಿ ಬೇರಾವುದೇ ಸಂದರ್ಭದಲ್ಲಿ ರೋಗಿಯ ಅನುಮತಿ ಪಡೆಯದೇ ಶಸ್ತ್ರಚಿಕಿತ್ಸೆ ನಡೆಸಬಾರದೆಂದೂ ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿತು.

ದುಬಾರಿ ವೆಚ್ಚಗಳನ್ನು ಒಳಗೊಂಡ ಅನೇಕ ಪರೀಕ್ಷೆಗಳಿಗೆ ರೋಗಿಗಳನ್ನು ಗುರಿಮಾಡುವ ಮೂಲಕ ಆರೋಗ್ಯಸೇವೆಯ ವಾಣಿಜ್ಯೀಕರಣ ಹೆಚ್ಚುತ್ತಿರುವ ಬಗ್ಗೆ ಮೂವರು ನ್ಯಾಯಾಧೀಶರ ಪೀಠವು ತೀವ್ರ ಹತಾಶೆ ವ್ಯಕ್ತಪಡಿಸಿತು. ರೋಗಿಯೊಬ್ಬನ ಜೀವವುಳಿಸಲು ಅಥವಾ ಅವನ ಆರೋಗ್ಯರಕ್ಷಣೆ ಮಾಡುವ ವಿಧಾನ ಅಗತ್ಯವಾಗಿದ್ದರೆ ಮಾತ್ರ ರೋಗಿಗೆ ಪ್ರಜ್ಞೆಗೆ ಬಂದು ನಿರ್ಧಾರ ತೆಗೆದುಕೊಳ್ಳುವ ತನಕ ಕಾಯುವುದು ಅಸಮಂಜಸ ಎಂದು ಕೋರ್ಟ್ ತಿಳಿಸಿದ್ದು, ಬೇರೆ ಸಂದರ್ಭಗಳಲ್ಲಿ ರೋಗಿಯ ಅನುಮತಿಯಿಲ್ಲದೇ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿತು.

ಸಾಮಿರಿ ಕೊಹ್ಲಿ ಎಂಬ ಮಹಿಳೆಯ ಅನುಮತಿ ಪಡೆಯದೇ ಆಕೆಯ ಗರ್ಭಕೋಶವನ್ನು ತೆಗೆದ ವೈದ್ಯೆ ಡಾ.ಪ್ರಭಾ ಮಾನ್‌ಚಂದಾ ಪ್ರಕರಣದಲ್ಲಿ ಶಸ್ತ್ರಚಿಕಿತ್ಸೆಯ ಶುಲ್ಕವನ್ನು ರದ್ದುಮಾಡಿ ಮಹಿಳೆಗೆ 25,000 ರೂ. ಪರಿಹಾರ ಪ್ರಕಟಿಸಿ ನ್ಯಾಯಮೂರ್ತಿ ಬಿ.ಎನ್. ಅಗರವಾಲ್, ಪಿ.ಪಿ. ನಾವ್ಲೇಕರ್ ಮತ್ತು ಆರ್.ವಿ. ರವೀಂದ್ರನ್ ಅವರಿದ್ದ ಪೀಠವು ತೀರ್ಪು ನೀಡಿದೆ.

ಕೋಹ್ಲಿ ಅವರನ್ನು ಲ್ಯಾಪ್ರೋಸ್ಕೋಪಿಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾಗ ಆಕೆಯ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಭವಿಷ್ಯದಲ್ಲಿ ಮಕ್ಕಳನ್ನು ಹೆರುವ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದರು.
ಮತ್ತಷ್ಟು
ವಿಕಲಚೇತನರಿಗೆ ಖಾಸಗಿ ಉದ್ಯೋಗಕ್ಕೆ ಅಸ್ತು
ಜಲ್ಲಿಕಟ್ಟು ಆಟದಲ್ಲಿ 129 ಜನರಿಗೆ ಗಾಯ
ವರದಿ ಸಲ್ಲಿಕೆಗೆ ಸಿಬಿಐಗೆ ಕಾಲಾವಕಾಶ
ಆರೋಪವಿದ್ದರೂ ಭಲ್ಲಾಗೆ ಬಡ್ತಿ ನೀಡಿದ ರಾಷ್ಟ್ರಪತಿ
ಕಾಶ್ಮೀರ: ಉಗ್ರರ ದಾಳಿ ವಿರುದ್ಧ ಬಿಗಿ ಭದ್ರತೆ
ಗೋವಾ ಬಿಕ್ಕಟ್ಟು:ಬೆಂಬಲ ಹಿಂತೆಗೆದ ಎನ್‌ಸಿಪಿ