ಎನ್‌ಡಿಟಿವಿ ಪ್ರಶಸ್ತಿ ಪ್ರಧಾನ ಸಮಾರಂಭವು ಗುರುವಾರ ರಾತ್ರಿ ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಅತ್ಯಂತ ವೈಭವಯುತವಾಗಿ ನಡೆದಿದೆ.
ಗಣ್ಯರು, ಸೆಲೆಬ್ರೆಟಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ, ಎನ್‌ಡಿಟಿವಿ ವರ್ಷದ ನಾಯಕ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಡೆದುಕೊಂಡಿದ್ದಾರೆ.
ಎನ್‌ಡಿಟಿವಿ ಭಾರತೀಯ ಅತ್ಯುನ್ನತ ಪ್ರಶಸ್ತಿಯನ್ನು ಭಾರತೀಯ ಸೈನಿಕರಿಗೆ ನೀಡಲಾಗಿದ್ದು, ವರ್ಷದ ಉದ್ಯಮಿ ಪ್ರಶಸ್ತಿಗೆ ಮುಖೇಶ್ ಅಂಬಾನಿ ಪಾತ್ರರಾಗಿದ್ದಾರೆ.
ಎನ್‌ಡಿಟಿವಿ ವರ್ಷದ ಆಟಗಾರನಾಗಿ ವಿಶ್ವನಾಥ್ ಆನಂದ್ ಮೂಡಿಬಂದಿದ್ದು, ಬಾಸ್ ರಜನೀಕಾಂತ್ ಎನ್‌ಡಿಟಿವಿ ವರ್ಷದ ಮನರಂಜಕನಾಗಿ ಮೆರೆದಿದ್ದಾರೆ.
ಅಲ್ಲದೆ, ಎನ್‌ಟಿವಿ ವರ್ಷದ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಎ.ಆರ್.ರೆಹಮಾನ್ ಪಡೆದುಕೊಂಡಿದ್ದಾರೆ.ಅತ್ಯುನ್ನತ ಸೇನಾ ಪ್ರಶಸ್ತಿಯನ್ನು ಭೂ, ವಾಯು ಮತ್ತು ನೌಕಾದಾಳದ ಮುಖ್ಯಸ್ಥರು ಜಂಟಿಯಾಗಿ ಸ್ವೀಕರಿಸಿದರು.
|