ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಹೈಕೋರ್ಟ್‌ನಲ್ಲಿ ಪ್ರವೀಣ್ ಮೇಲ್ಮನವಿ
ತಮ್ಮ ಸಹೋದರ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ ಹತ್ಯೆಗಾಗಿ ಶಿಕ್ಷೆಗೆ ಒಳಗಾಗಿರುವ ಪ್ರವೀಣ್ ಮಹಾಜನ್ ತಮಗೆ ಜೀವಾವಧಿ ಶಿಕ್ಷೆ ನೀಡಿದ ವಿಚಾರಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಂಬೈ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಎಸ್‌ಎಂಎಸ್ ಬೆದರಿಕೆ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ಪ್ರಮೋದ್ ಅವರ ಮರಣಶಯ್ಯೆಯ ಹೇಳಿಕೆಯನ್ನು ಸೆಷನ್ಸ್ ಕೋರ್ಟ್ ತಪ್ಪಾಗಿ ಒಪ್ಪಿಕೊಂಡಿರುವುದು ಮೇಲ್ಮನವಿಗೆ ಆಧಾರ ಎಂದ ಪ್ರವೀಣ್ ವಕೀಲ ಮುಖೇಶ್ ಮೋದಿ ತಿಳಿಸಿದ್ದಾರೆ.

ಏ.22ರಂದು ನಡೆದ ಹತ್ಯೆಗೆ ಕೆಲವು ದಿನಗಳ ಮುಂಚೆ ಪ್ರವೀಣ್ ಅವರು ಪ್ರಮೋದ್‌ಗೆ ಕಳಿಸಿದ ಬೆದರಿಕೆಯ ಎಸ್‌ಎಂಎಸ್‌ನ್ನು ಅವರ ವಿರುದ್ಧ ಸಾಕ್ಷ್ಯವಾಗಿ ವಿಚಾರಣೆ ನ್ಯಾಯಾಲಯ ಒಪ್ಪಿಕೊಂಡಿದೆ.

ಪ್ರವೀಣ್ ಅವರು ಪ್ರಮೋದ್ ನಿವಾಸಕ್ಕೆ ತೆರಳಿ ಅವರ ಪರವಾನಗಿ ಪಿಸ್ತೂಲಿನಿಂದ ಹಲವಾರು ಬಾರಿ ಗುಂಡುಹಾರಿಸಿದರೆಂದು ಪ್ರವೀಣ್ ವಿರುದ್ಧ ಆರೋಪಿಸಲಾಗಿದೆ. ಪ್ರಮೋದ್ ಕೆಲವು ದಿನಗಳ ಬಳಿಕ ನಗರದ ಆಸ್ಪತ್ರೆಯಲ್ಲಿ ಅಸುನೀಗಿದರು. ಎಸ್‌ಎಂಎಸ್ ತಿದ್ದಿರಬಹುದೆಂದು ನಾವು ವಿಚಾರಣೆ ನ್ಯಾಯಾಲಯದ ಮುಂದೆ ಪ್ರದರ್ಶಿಸುವ ಮೂಲಕ ಅದನ್ನು ಪ್ರಶ್ನಿಸಿರುವುದಾಗಿ ಮೋದಿ ಹೇಳಿದರು.
ಮತ್ತಷ್ಟು
ಎನ್‌ಡಿಟಿವಿ ವರ್ಷದ ನಾಯಕನಾಗಿ ಮಿಂಚಿದ ಪ್ರಧಾನಿ
ಗೋವಾ ವಿಧಾನಸಭೆ ಮುಂದೂಡಿಕೆ
ಶಸ್ತ್ರಚಿಕಿತ್ಸೆಗೆ ರೋಗಿಯ ಅನುಮತಿ: ಸುಪ್ರೀಂಕೋರ್ಟ್
ವಿಕಲಚೇತನರಿಗೆ ಖಾಸಗಿ ಉದ್ಯೋಗಕ್ಕೆ ಅಸ್ತು
ಜಲ್ಲಿಕಟ್ಟು ಆಟದಲ್ಲಿ 129 ಜನರಿಗೆ ಗಾಯ
ವರದಿ ಸಲ್ಲಿಕೆಗೆ ಸಿಬಿಐಗೆ ಕಾಲಾವಕಾಶ