ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲದ ಚಿಲ್ಲರೆ ಬೆಲೆ ಕನಿಷ್ಠ ಏರಿಕೆ: ದೆವೋರಾ
PTI
ಇಂಧನದ ಚಿಲ್ಲರೆ ದರದಲ್ಲಿ ಕನಿಷ್ಠ ಏರಿಕೆ ಮಾಡಲಾಗುವುದು ಎಂದು ಪೆಟ್ರೋಲಿಯಂ ಸಚಿವ ಮುರಳಿ ದೆವೋರಾ ಶುಕ್ರವಾರ ತಿಳಿಸಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಚಿವರ ತಂಡವು ಶನಿವಾರ ಭೇಟಿಯಾಗಲಿದೆ ಎಂದು ಹೇಳಿದರು.ಗ್ರಾಹಕರು ಯಾವುದೇ ದೂರು ನೀಡದಂತೆ ಮತ್ತು ತೈಲ ಮಾರಾಟ ಸಂಸ್ಥೆಗಳಿಗೆ ಹೆಚ್ಚು ನಷ್ಟವಾಗದಂತೆ ತೈಲ ಬೆಲೆಯನ್ನು ಕನಿಷ್ಠ ಏರಿಕೆ ಮಾಡಲಾಗುವುದು ಎಂದು ದಿಯೋರಾ ತಿಳಿಸಿದರು.

ಕೆಲವು ಸಚಿವರ ಗೈರಿನಿಂದ ಗುರುವಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದೂ ದಿಯೋರಾ ಸ್ಪಷ್ಟಪಡಿಸಿದರು. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ತಂಡವು ತೈಲ ಮಾರಾಟ ಕಂಪೆನಿಗಳ ಪ್ರಸ್ತಾವನೆಯನ್ನು ಪರಿಶೀಲನೆ ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕ್ರಮವಾಗಿ ರೂ.4 ಮತ್ತು ರೂ. 2 ಹೆಚ್ಚಿಸಬೇಕೆಂದು ತೈಲ ಉತ್ಪಾದನೆ ಸಂಸ್ಥೆಗಳು ಒತ್ತಾಯಿಸಿವೆ.

ತೈಲ ಬೆಲೆಗಳಲ್ಲಿ ಏರಿಕೆಯು ಮುಂದಿನ ವಾರದಿಂದ ಜಾರಿಗೆ ಬರುವುದೆಂದು ನಿರೀಕ್ಷಿಸಿರುವುದಾಗಿ ಪೆಟ್ರೋಲಿಯಂ ಕಾರ್ಯದರ್ಶಿ ಎಂ.ಎಸ್. ಶ್ರೀನಿವಾಸನ್ ತಿಳಿಸಿದರು. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಪಡಿತರ ಸೀಮೆಎಣ್ಣೆ ಮಾರಾಟದಿಂದ ಮೂರು ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದಕ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ 69,754 ಕೋಟಿ ನಷ್ಟ ತೋರಿಸಿದೆ.

ಸರ್ಕಾರವು ಆಮದು ಕಚ್ಚಾ ತೈಲದ ವೆಚ್ಚಕ್ಕೆ ಹೊಂದಿಕೆಯಾಗುವಂತೆ ಬೆಲೆ ಏರಿಕೆಗೆ ಅವಕಾಶ ನೀಡದಿರುವುದು ಈ ನಷ್ಟ ಅನುಭವಿಸಲು ಕಾರಣವಾಗಿದೆ. ಪೆಟ್ರೋಲ್ ಲೀಟರ್‌ಗೆ 8.74ರೂ ನಷ್ಟದಲ್ಲಿ, ಡೀಸೆಲ್ ಲೀಟರ್‌ಗೆ 9.92ರೂ. ನಷ್ಟ, ಸೀಮೆಎಣ್ಣೆ ಲೀಟರ್‌ಗೆ 20.53ರೂ ಮತ್ತು ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ 256.35ರೂ. ನಷ್ಟ ಅನುಭವಿಸುತ್ತಿದೆ.
ಮತ್ತಷ್ಟು
ಮುಂಬೈ ಹೈಕೋರ್ಟ್‌ನಲ್ಲಿ ಪ್ರವೀಣ್ ಮೇಲ್ಮನವಿ
ಎನ್‌ಡಿಟಿವಿ ವರ್ಷದ ನಾಯಕನಾಗಿ ಮಿಂಚಿದ ಪ್ರಧಾನಿ
ಗೋವಾ ವಿಧಾನಸಭೆ ಮುಂದೂಡಿಕೆ
ಶಸ್ತ್ರಚಿಕಿತ್ಸೆಗೆ ರೋಗಿಯ ಅನುಮತಿ: ಸುಪ್ರೀಂಕೋರ್ಟ್
ವಿಕಲಚೇತನರಿಗೆ ಖಾಸಗಿ ಉದ್ಯೋಗಕ್ಕೆ ಅಸ್ತು
ಜಲ್ಲಿಕಟ್ಟು ಆಟದಲ್ಲಿ 129 ಜನರಿಗೆ ಗಾಯ