ದಲಿತ ಎಂಬ ಪದದ ಬಳಕೆ ಅಸಂವಿಧಾನಿಕವಾದ್ದರಿಂದ ಅಧಿಕೃತ ದಾಖಲೆಗಳಲ್ಲಿ ಆ ಪದವನ್ನು ಬಳಸಬಾರದೆಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ರಾಜ್ಯಸರ್ಕಾರಗಳಿಗೆ ಆದೇಶಿಸಿದೆ. ಕೆಲವು ಬಾರಿ ಪರಿಶಿಷ್ಟ ಜಾತಿಗೆ ಪರ್ಯಾಯ ಪದವಾಗಿ ಅಧಿಕೃತ ದಾಖಲೆಗಳಲ್ಲಿ ದಲಿತ ಪದವನ್ನು ಬಳಸಲಾಗುತ್ತಿದೆ ಎಂದು ರಾಜ್ಯ ಬುಡಕಟ್ಟು ಇಲಾಖೆಯ ಮೂಲಗಳು ಶುಕ್ರವಾರ ಇಲ್ಲಿ ತಿಳಿಸಿವೆ.
ಕಾನೂನು ಇಲಾಖೆಯ ಜತೆ ಸಮಾಲೋಚಿಸಿದ ಬಳಿಕ ದಲಿತ ಪದವು ಸಂವಿಧಾನಿಕವಲ್ಲ ಮತ್ತು ಪ್ರಸಕ್ತ ಕಾನೂನುಗಳಲ್ಲಿ ಅದರ ಪ್ರಸ್ತಾವನೆಯಾಗಿಲ್ಲ ಎಂದು ಆಯೋಗ ತಿಳಿಸಿದೆ. 341ನೆ ಪರಿಚ್ಛೇದದ ಪ್ರಕಾರ ಪರಿಶಿಷ್ಟ ಜಾತಿ ಸೂಕ್ತವಾದ ಪದ ಎಂದು ಎಲ್ಲಾ ರಾಜ್ಯಗಳಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದೆ.
ಈ ಆದೇಶದ ಮೇಲೆ ಕ್ರಮ ಕೈಗೊಂಡಿರುವ ಚತ್ತೀಸ್‌ಗಢ ಸರ್ಕಾರ ತಮ್ಮ ದಾಖಲೆಗಳಲ್ಲಿ ದಲಿತ ಪದವನ್ನು ಬಳಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಅದರ ಇಲಾಖೆಗಳಿಗೆ ಆದೇಶ ನೀಡಿದೆ.
|