ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಚಾರ್ ಸಮಿತಿ ಶಿಫಾರಸು ಪರಾಮರ್ಶೆಗೆ ಸಭೆ
PTI
ಮುಸ್ಲಿಮರನ್ನು ಕುರಿತ ಸಾಚಾರ್ ಸಮಿತಿ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಲು ಪ್ರಧಾನಮಂತ್ರಿ ಮನಮೋಹನ ಸಿಂಗ್ ಗುರುವಾರ ತಡರಾತ್ರಿಯಲ್ಲಿ ಸಭೆ ನಡೆಸಿದರು. ಸಾಚಾರ್ ಸಮಿತಿಯ ವರದಿಯ ಆಧಾರದ ಮೇಲೆ ಆರಂಭವಾದ ಮುಸ್ಲಿಮರಿಗಿರುವ ವಿವಿಧ ರಾಜ್ಯಗಳ ವಿಶೇಷ ಯೋಜನೆಗಳ ಅನುಷ್ಠಾನವನ್ನು ಕುರಿತು ಸಭೆಯಲ್ಲಿ ಚರ್ಚಿಸಲಾಯಿತೆಂದು ಮೂಲಗಳು ಹೇಳಿವೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಎ.ಆರ್. ಅಂಟುಲೆ, ವಿತ್ತ ಸಚಿವ ಪಿ.ಚಿದಂಬರಂ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಮತ್ತು ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು. ಮುಸ್ಲಿಮರಿಗಿರುವ ವಿಶೇಷ ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ನಡೆಸುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಲಾಯಿತು ಎಂದು ಮೂಲಗಳು ಹೇಳಿವೆ.

ಸಾಚಾರ್ ಸಮಿತಿಯು ತನ್ನ ವರದಿಯಲ್ಲಿ ಮುಸ್ಲಿಮರು ಎಲ್ಲ ಮಟ್ಟಗಳಲ್ಲಿ, ಎಲ್ಲ ಕ್ಷೇತ್ರಗಳಲ್ಲಿ ಅನುಭವಿಸಿದ ಅಸಮಾನತೆ ಮತ್ತು ತಾರತಮ್ಯದ ಪರಿಕಲ್ಪನೆಯನ್ನು ನಿವಾರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕೆಂದು ತಿಳಿಸಿದೆ.

ಮುಸ್ಲಿಮರಿಗೆ ವಸತಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ನೀಡುವ ಸೂಕ್ತ ವ್ಯವಸ್ಥೆಯನ್ನು ಅಳವಡಿಸಬೇಕೆಂದು ಸಲಹೆ ಮಾಡಿರುವ ವರದಿ ವೈವಿಧ್ಯತೆ ಸಾರ್ವಜನಿಕ ನೀತಿಯ ಮುಖ್ಯ ಲಕ್ಷಣವಾಗಿರಬೇಕೆಂದು ತಿಳಿಸಿದೆ.
ಮತ್ತಷ್ಟು
ಟಾಟಾ ಭೂಸ್ವಾಧೀನ ಪ್ರಶ್ನಿಸಿದ ಎಲ್ಲ ಅರ್ಜಿ ವಜಾ
ದಲಿತ ಪದ ಬಳಸದಂತೆ ರಾಜ್ಯಸರ್ಕಾರಗಳಿಗೆ ಆದೇಶ
ತೈಲದ ಚಿಲ್ಲರೆ ಬೆಲೆ ಕನಿಷ್ಠ ಏರಿಕೆ: ದೆವೋರಾ
ಮುಂಬೈ ಹೈಕೋರ್ಟ್‌ನಲ್ಲಿ ಪ್ರವೀಣ್ ಮೇಲ್ಮನವಿ
ಎನ್‌ಡಿಟಿವಿ ವರ್ಷದ ನಾಯಕನಾಗಿ ಮಿಂಚಿದ ಪ್ರಧಾನಿ
ಗೋವಾ ವಿಧಾನಸಭೆ ಮುಂದೂಡಿಕೆ