ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಲ್ಕಿಸ್ ಬಾನೊ ಪ್ರಕರಣ: 13 ಜನರು ತಪ್ಪಿತಸ್ಥರು
ಗೋಧ್ರಾ ದುರಂತದ ಬಳಿಕ ಗುಜರಾತ್‌ನಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಕುಖ್ಯಾತವಾದ ಬಿಲ್ಕಿಸ್ ಬಾನೊ ಸಮೂಹ ಅತ್ಯಾಚಾರ ಮತ್ತು ಹತ್ಯಾಕಾಂಡ ಪ್ರಕರಣದಲ್ಲಿ ವಿಶೇಷ ಸಿಬಿಐ ಕೋರ್ಟ್ ಶುಕ್ರವಾರ ಪೊಲೀಸ್ ಅಧಿಕಾರಿ ಸೇರಿದಂತೆ 13 ಜನರನ್ನು ತಪ್ಪಿತಸ್ಥರನ್ನಾಗಿ ಮಾಡಿದೆ. ಶಿಕ್ಷೆಯ ಸ್ವರೂಪವನ್ನು ಜ.21ರಂದು ಪ್ರಕಟಿಸಲಾಗುವುದು.

ಗುಜರಾತ್‌ನಲ್ಲಿ ಮುಕ್ತ ವಿಚಾರಣೆ ನಡೆಯುವ ಬಗ್ಗೆ ಬಿಲ್ಕಿಸ್ ಬಾನೊ ಸಂದೇಹ ವ್ಯಕ್ತಪಡಿಸಿದ್ದರಿಂದ ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಗುಜರಾತಿನಿಂದ ಮಹಾರಾಷ್ಟ್ರಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಈ ಹತ್ಯಾಕಾಂಡದಲ್ಲಿ ಬಿಲ್ಕಿಸ್ ಬಾನೊ ಕುಟುಂಬದ 14 ಜನರನ್ನು ಕೊಲ್ಲಲಾಗಿತ್ತು. 6 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ದಾಳಿಯಲ್ಲಿ ಜೀವಸಹಿತ ಪಾರಾಗಿದ್ದರು.

ಈ ಪ್ರಕರಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಯು.ಡಿ. ಸಾಲ್ವಿ 13 ಜನರನ್ನು ತಪ್ಪಿತಸ್ಥರನ್ನಾಗಿ ಮಾಡಿತು ಮತ್ತು ಸಾಕ್ಷ್ಯಾಧಾರ ತಿದ್ದಿದ ಆರೋಪವಿದ್ದ ವೈದ್ಯ ದಂಪತಿ ಸೇರಿದಂತೆ 7 ಜನರನ್ನು ದೋಷಮುಕ್ತಗೊಳಿಸಿತು.
ಮತ್ತಷ್ಟು
ಸಾಚಾರ್ ಸಮಿತಿ ಶಿಫಾರಸು ಪರಾಮರ್ಶೆಗೆ ಸಭೆ
ಟಾಟಾ ಭೂಸ್ವಾಧೀನ ಪ್ರಶ್ನಿಸಿದ ಎಲ್ಲ ಅರ್ಜಿ ವಜಾ
ದಲಿತ ಪದ ಬಳಸದಂತೆ ರಾಜ್ಯಸರ್ಕಾರಗಳಿಗೆ ಆದೇಶ
ತೈಲದ ಚಿಲ್ಲರೆ ಬೆಲೆ ಕನಿಷ್ಠ ಏರಿಕೆ: ದೆವೋರಾ
ಮುಂಬೈ ಹೈಕೋರ್ಟ್‌ನಲ್ಲಿ ಪ್ರವೀಣ್ ಮೇಲ್ಮನವಿ
ಎನ್‌ಡಿಟಿವಿ ವರ್ಷದ ನಾಯಕನಾಗಿ ಮಿಂಚಿದ ಪ್ರಧಾನಿ