ಜೈಶ್ ಎ ಮೊಹಮ್ಮದ್ ಉಗ್ರಗಾಮಿಗಳು,1999ರ ಡಿಸೆಂಬರ್‌ನಲ್ಲಿ ನಡೆಸಿದ ಇಂಡಿಯನ್ ಏರ್‌ಲೈನ್ಸ್ ಅಪಹರಣಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಬಂಧಿಸಲಾದ ಮೂವರ ತೀರ್ಪನ್ನು ಸಿಬಿಐ ನ್ಯಾಯಾಲಯವು ಜನವರಿ 29ಕ್ಕೆ ನೀಡಲಿದೆ.
ಅಬ್ದುಲ್ ಲತೀಫ್, ದಾಲಿಪ್ ಕುಮಾರ್ ಮತ್ತು ಯೂಸುಫ್ ನೇಪಾಳಿ ಇವರ ವಿರುದ್ಧದ ಕೇಸಿನ ವಿಚಾರಣೆಯನ್ನು, ಸಿಬಿಐ ವಿಶೇಷ ನ್ಯಾಯಾಧೀಶ ಇಂದ್ರಜಿತ್ ಸಿಂಗ್ ವಾಲಿಯಾ ಜನವರಿ 29ಕ್ಕೆ ಕಾಯ್ದಿರಿಸಿದ್ದಾರೆ.
1999 ಡಿಸೆಂಬರ್ 24ರಂದು ಸುಮಾರು 180 ಪ್ರಯಾಣಿಕರಿದ್ದ ಇಂಡಿಯನ್ ಏರ್‌ಲೈನ್ಸ್ ಅಪಹರಣದ ಸಂಚುಗಾರರೆಂದು ಆ ಮೂವರ ಮೇಲೆ ಆರೋಪ ಮಾಡಲಾಗಿದ್ದು, ಅಪಹರಣ ನಡೆದು ಸ್ವಲ್ಪ ದಿನಗಳ ಬಳಿಕ ಇವರನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು.
ಕ್ರಿಸ್‌ಮಸ್‌ನಿಂದ ಹೊಸವರ್ಷದವರೆಗಿನ ಅಪಹರಣದ ಒಂದುವಾರದ ಕಠಿಣ ಅವಧಿಯಲ್ಲಿ ಉಗ್ರಗಾಮಿಗಳು ಒಬ್ಬರನ್ನು ಗುಂಡಿಕ್ಕಿ ಕೊಂದಿದ್ದರು.
ಬಂಧಿತರು ಪಾಕಿಸ್ತಾನ ಮೂಲದ ಉಗ್ರಗಾಮಿಗಳಿಗೆ ನಕಲಿ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ಒದಗಿಸುತ್ತಿದ್ದರು ಅಲ್ಲದೆ ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ತರಲು ಸಹಾಯ ಮಾಡುತ್ತಿದ್ದರು ಎಂಬುದಾಗಿ ಆರೋಪಿಸಲಾಗಿತ್ತು.
|