ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಬ್ಬ ಬೌದ್ಧ ಬಿಕ್ಕು ಆತ್ಮಹತ್ಯೆ
ಹತ್ಯೆಯೆಂದು ಶಂಕಿಸಲಾದ ಬೌದ್ಧ ಬಿಕ್ಕುವೊಬ್ಬರ ನಿಗೂಢ ಸಾವು ಸಂಭವಿಸಿದ ಎರಡು ವಾರಗಳಲ್ಲೇ ಅದೇ ಧರ್ಮಕ್ಕೆ ಸೇರಿದ ಬಿಕ್ಕುವೊಬ್ಬರು ಸಬರ್ಬನ್ ದಿಯೋನಾರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಭವಿಸಿದೆ. ಲಾತೂರ್‌ನ 40 ವರ್ಷ ವಯಸ್ಸಿನ ಬಾದಂತ್ ಕಶ್ಯಪ್ ತನ್ನ ನಿವಾಸದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಶ್ಯಪ್ ಮರಾಠಿ ಭಾಷೆಯಲ್ಲಿ ಆತ್ಮಹತ್ಯೆ ಟಿಪ್ಪಣಿಯೊಂದನ್ನು ಬರೆದಿಟ್ಟಿದ್ದು, ಬೌದ್ಧ ಬಿಕ್ಕು ಬಾದಂತ್ ಸಂಗರಾಜ್ ತೈರೊ ಹತ್ಯೆ ಮಾಡಿ ಬಂಧಿತರಾದವರಿಗೆ ಕಠಿಣ ಶಿಕ್ಷೆ ನೀಡುವುದರ ಖಾತರಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ. ಕೀಟನಾಶಕ ಸೇವನೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟರು.

ಅದೇ ಪ್ರದೇಶದಲ್ಲಿದ್ದ ಬೌದ್ಧ ಬಿಕ್ಕು ಬಾದಂತ್ ಸಂಗರಾಜ್ ಕೂಡ ತಮ್ಮ ಮನೆಯಲ್ಲಿ ಮೃತರಾಗಿದ್ದು ಕಂಡುಬಂದ ಬಳಿಕ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳು ಸಂಭವಿಸಿದ್ದವು.ಪೊಲೀಸರು ಆರಂಭದಲ್ಲಿ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿದರೂ, ಬಳಿಕ ಹತ್ಯೆ ಪ್ರಕರಣವನ್ನು ದಾಖಲಿಸಿ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದರು.
ಮತ್ತಷ್ಟು
ಬೆಳೆಯುತ್ತಿರುವ ಭಾರತ ರತ್ನ ಪಟ್ಟಿ: ಭಗತ್ ಸೇರ್ಪಡೆ
ವಿಮಾನ ಅಪಹರಣ:ಜ.29ಕ್ಕೆ ತೀರ್ಪು
ಬಿಲ್ಕಿಸ್ ಬಾನೊ ಪ್ರಕರಣ: 13 ಜನರು ತಪ್ಪಿತಸ್ಥರು
ಸಾಚಾರ್ ಸಮಿತಿ ಶಿಫಾರಸು ಪರಾಮರ್ಶೆಗೆ ಸಭೆ
ಟಾಟಾ ಭೂಸ್ವಾಧೀನ ಪ್ರಶ್ನಿಸಿದ ಎಲ್ಲ ಅರ್ಜಿ ವಜಾ
ದಲಿತ ಪದ ಬಳಸದಂತೆ ರಾಜ್ಯಸರ್ಕಾರಗಳಿಗೆ ಆದೇಶ