ಎನ್‌ಡಿಟಿವಿ ಸುದ್ದಿಸಂಸ್ಥೆಯ ಎಸ್‌ಎಂಎಸ್ ಭಾರತ ರತ್ನ ಪ್ರಶಸ್ತಿಗೆ ಸ್ಪರ್ಧಿಯಾಗಿ ಹೆಸರಾಂತ ಚಿತ್ರಕಲಾವಿದ ಎಂ.ಎಫ್.ಹುಸೇನ್ ಅವರ ಹೆಸರನ್ನು ಸೇರಿಸಿದ್ದನ್ನು ಪ್ರತಿಭಟಿಸಿ ಬಲಪಂಥೀಯ ಹಿಂದು ಸಂಘಟನೆಯೊಂದು ಶನಿವಾರ ಎನ್‌ಡಿಟಿವಿ ಕಚೇರಿಯಲ್ಲಿ ದಾಂಧಲೆ ನಡೆಸಿದ್ದಲ್ಲದೇ ಇಬ್ಬರು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂದು ಸಾಮ್ರಾಜ್ಯ ಸೇನೆಯ ಸುಮಾರು 20 ಕಾರ್ಯಕರ್ತರು ಹಾಕಿ ಸ್ಟಿಕ್‌ಗಳೊಂದಿಗೆ ವಸತಿ ಪ್ರದೇಶದಲ್ಲಿರುವ ಖಾಸಗಿ ಚಾನೆಲ್ ಕಚೇರಿಯಲ್ಲಿ ದಾಳಿ ನಡೆಸಿತು.
ವರದಿಗಾರರಿಗೆ ಹುಡುಕಾಡಿದ ಕಾರ್ಯಕರ್ತರು ಅವರು ಸಿಗದಿದ್ದಾಗ ಕಚೇರಿಯನ್ನು ಧ್ವಂಸ ಮಾಡಿದ್ದಲ್ಲದೇ ಇಬ್ಬರು ಸಿಬ್ಬಂದಿಯನ್ನು ಥಳಿಸಿದರು. ಕಚೇರಿಯ ಸಾಮಗ್ರಿಗಳನ್ನು, ಹವಾ ನಿಯಂತ್ರಕಗಳನ್ನು ಧ್ವಂಸ ಮಾಡಿದ ಬಳಿಕ ಕಾರ್ಯಕರ್ತರು ತಮ್ಮ ಸಂಘಟನೆಯ ಬ್ಯಾನರ್‌ಗಳು ಮತ್ತು ಭಿತ್ತಿಚಿತ್ರಗಳನ್ನು ಬಿಟ್ಟುಹೋದರು.
ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗೆ ಅಭ್ಯರ್ಥಿಯಾಗಿ ಹುಸೇನ್ ಹೆಸರು ಸೇರಿಸಿದ್ದಕ್ಕಾಗಿ ಚಾನೆಲ್ ಕ್ಷಮಾಪಣೆ ಕೇಳಬೇಕೆಂದು ಸಂಘಟನೆ ಒತ್ತಾಯಿಸಿರುವುದಾಗಿ ಎನ್‌ಡಿಟಿವಿ ಪತ್ರಕರ್ತರು ತಿಳಿಸಿದ್ದಾರೆ.
|