ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನಾ ವೃತ್ತಿ ಇನ್ನಷ್ಟು ಆಕರ್ಷಣೀಯ: ಆಂಟೋನಿ
ಸೇನಾ ಪಡೆಗಳ ವೃತ್ತಿಯನ್ನು ಉತ್ತಮ ಸಂಬಳ, ಪ್ರೋತ್ಸಾಹಕಗಳು ಮತ್ತು ಅವಕಾಶಗಳಿಂದ ಇನ್ನಷ್ಟು ಆಕರ್ಷಣೀಯವಾಗಿ ಮಾಡುವುದಾಗಿ ರಕ್ಷಣಾ ಸಚಿವ ಎ.ಕೆ. ಆಂಟೊನಿ ಶನಿವಾರ ತಿಳಿಸಿದ್ದಾರೆ. ರಕ್ಷಣಾ ಪಡೆಗಳಿಗೆ ಸೇರುವ ಜನರಿಗೆ ಉತ್ತಮ ಸಂಬಳಗಳು ಮತ್ತು ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಇತರ ಕ್ಷೇತ್ರಗಳ ಜತೆ ಪೈಪೋಟಿಗಿಳಿಯುಂತೆ ಮಾಡುತ್ತೇವೆ ಎಂದು ಎನ್‌ಸಿಸಿ ಗಣರಾಜ್ಯ ದಿನ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರದಿಗಾರರಿಗೆ ತಿಳಿಸಿದರು.

ಇದಕ್ಕೆ ಮುಂಚೆ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಕರ ಶಕ್ತಿಯನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ವಿಶಿಷ್ಠ ಸಂಘಟನೆ ಎನ್‌ಸಿಸಿ ಎಂದು ಹೇಳಿದ ಆಂಟೋನಿ ಸೇನಾಪಡೆಗೆ ಸೇರಲು ಇಚ್ಛಿಸುವ ಕೆಡೆಟ್‌ಗಳಿಗೆ ಹೆಚ್ಚು ಅವಕಾಶಗಳನ್ನು ನೀಡುವ ಭರವಸೆ ನೀಡಿದರು.

ನಾವು ನಾಗರಿಕರಿಗೆ ಸೇನಾ ತರಬೇತಿ ನೀಡುವ ಬಗ್ಗೆ ಗಂಭೀರ ಪರಿಶೀಲನೆ ಮಾಡಿದ್ದೇವೆ. ಆದರೆ ಅದು ಕಾರ್ಯಸಾಧ್ಯವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು. ಎನ್‌ಸಿಸಿ ಶಿಬಿರಕ್ಕೆ ಆಗಮಿಸಿದ ರಕ್ಷಣಾ ಸಚಿವರಿಗೆ ಸೇನೆ, ನೌಕೆ ಮತ್ತು ವಾಯುದಳದ ಎನ್‌ಸಿಸಿ ಕೆಡೆಟ್‌ಗಳು ಗೌರವ ವಂದನೆ ಅರ್ಪಿಸಿದರು. ಗಣರಾಜ್ಯದಿನದ ಶಿಬಿರದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1900 ಕೆಡೆಟ್‌ಗಳು ಭಾಗವಹಿಸಿದ್ದರು.
ಮತ್ತಷ್ಟು
ಎನ್‌ಡಿಟಿವಿಯಲ್ಲಿ ದಾಂಧಲೆ: ಸಿಬ್ಬಂದಿಗೆ ಹಲ್ಲೆ
ಇನ್ನೊಬ್ಬ ಬೌದ್ಧ ಬಿಕ್ಕು ಆತ್ಮಹತ್ಯೆ
ಬೆಳೆಯುತ್ತಿರುವ ಭಾರತ ರತ್ನ ಪಟ್ಟಿ: ಭಗತ್ ಸೇರ್ಪಡೆ
ವಿಮಾನ ಅಪಹರಣ:ಜ.29ಕ್ಕೆ ತೀರ್ಪು
ಬಿಲ್ಕಿಸ್ ಬಾನೊ ಪ್ರಕರಣ: 13 ಜನರು ತಪ್ಪಿತಸ್ಥರು
ಸಾಚಾರ್ ಸಮಿತಿ ಶಿಫಾರಸು ಪರಾಮರ್ಶೆಗೆ ಸಭೆ