ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾ ಬಿಕ್ಕಟ್ಟಿನ ಪರಿಹಾರಕ್ಕೆ ಮಾತುಕತೆ
ಗೋವಾ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ಹೊಸ ಪ್ರಯತ್ನವಾಗಿ, ಕಾಂಗ್ರೆಸ್ ಮತ್ತು ಎನ್‌ಸಿಪಿ ಕೇಂದ್ರ ನಾಯಕರ ಜತೆ ಮಾತುಕತೆ ನಡೆಸಲು ನಾಲ್ವರು ಬಂಡಾಯ ಶಾಸಕರಲ್ಲಿ ಇಬ್ಬರು ಸಮ್ಮತಿಸಿದ್ದಾರೆ. ಗೋವಾದ ದಿಗಂಬರ ಕಾಮತ್ ಸರ್ಕಾರವನ್ನು ಉಳಿಸುವ ಕ್ರಮವಾಗಿ ಎನ್‌ಸಿಪಿಯ ಒಬ್ಬರು ಶಾಸಕರು ಮತ್ತು ಪಕ್ಷೇತರ ಶಾಸಕರೊಬ್ಬರು ಕೇಂದ್ರ ನಾಯಕರ ಜತೆ ಮಾತುಕತೆ ನಡೆಸಲು ನವದೆಹಲಿಗೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಸರ್ಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡುವ ವಿಶ್ವಾಸವನ್ನು ಸಮ್ಮಿಶ್ರ ಕೂಟ ಹೊಂದಿರುವುದಾಗಿ ಮೂಲಗಳು ಹೇಳಿವೆ. 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರು, ಬಿಜೆಪಿ 14, ಎನ್‌ಸಿಪಿ 3 ಮತ್ತು ಸೇವ್ ಗೋವಾ ಫ್ರಂಟ್ ಮತ್ತು ಎಂಜಿಪಿ ತಲಾ ಇಬ್ಬರು ಶಾಸಕರನ್ನು ಹೊಂದಿದೆ.

ಪ್ರಸಕ್ತ ಬಿಕ್ಕಟ್ಟಿನೊಂದಿಗೆ ಕಾಂಗ್ರೆಸ್ ಶಿಬಿರದಲ್ಲಿ ಕೇವಲ 16 ಶಾಸಕಬಲವಿದೆ. ಕಾಂಗ್ರೆಸ್ ಮತ್ತು ಎಸ್‌ಜಿಎಫ್‌ನ ತಲಾ ಒಬ್ಬರು ಶಾಸಕರು ಭಿನ್ನಮತೀಯರ ಜತೆಸೇರಿದ್ದು, ಯಾವುದೇ ಪಕ್ಷವು ಅವರ ಬೆಂಬಲವಿಲ್ಲದೇ ಸರ್ಕಾರ ರಚಿಸುವುದು ಅಸಾಧ್ಯವಾದ್ದರಿಂದ ಬಿರುಸಿನ ಚೌಕಾಸಿ ವ್ಯಾಪಾರ ನಡೆದಿದೆಯೆಂದು ಹೇಳಲಾಗಿದೆ.
ಮತ್ತಷ್ಟು
ಸೇನಾ ವೃತ್ತಿ ಇನ್ನಷ್ಟು ಆಕರ್ಷಣೀಯ: ಆಂಟೋನಿ
ಎನ್‌ಡಿಟಿವಿಯಲ್ಲಿ ದಾಂಧಲೆ: ಸಿಬ್ಬಂದಿಗೆ ಹಲ್ಲೆ
ಇನ್ನೊಬ್ಬ ಬೌದ್ಧ ಬಿಕ್ಕು ಆತ್ಮಹತ್ಯೆ
ಬೆಳೆಯುತ್ತಿರುವ ಭಾರತ ರತ್ನ ಪಟ್ಟಿ: ಭಗತ್ ಸೇರ್ಪಡೆ
ವಿಮಾನ ಅಪಹರಣ:ಜ.29ಕ್ಕೆ ತೀರ್ಪು
ಬಿಲ್ಕಿಸ್ ಬಾನೊ ಪ್ರಕರಣ: 13 ಜನರು ತಪ್ಪಿತಸ್ಥರು