ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋವಾ ಬಿಕ್ಕಟ್ಟು ಅಂತ್ಯ;ಸಂಪುಟ ವಿಸ್ತರಣೆ ಶೀಘ್ರ
ಗೋವಾದಲ್ಲಿ ಕಳೆದ ನಾಲ್ಕು ದಿನಗಳಿಂದ ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಅಂತ್ಯಗೊಂಡಿದ್ದು ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಖಾತೆಗಳ ಹಂಚಿಕೆ ಮಾಡಲಾಗುತ್ತದೆ ಎಂದು ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ತಿಳಿಸಿದ್ದಾರೆ.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಬಿಕ್ಕಟ್ಟಿನ ವಿವರಗಳ ಕುರಿತು ಚರ್ಚಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.

ಕೊನೆಯಲ್ಲಿ ಸೋನಿಯಾಗಾಂಧಿ ಪಕ್ಷದ ಮುಖಂಡರೊಡನೆ ಚರ್ಚಿಸಿ ಶ್ರೀಘ್ರ ಸಂಪುಟ ಪುನರ್‌ರಚನೆಗೆ ಸಮ್ಮತಿ ಸೂಚಿಸಿದ್ದು ಖಾತೆಗಳ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ

ಎನ್‌ಸಿಪಿ ಸದಸ್ಯರ ಬೆಂಬಲ ಹಿಂತೆಗತದಿಂದಾಗಿ ದಿಗಂಬರ್ ಕಾಮತ್ ಅವರ ಸರಕಾರ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿರುವುದು ಕೊನೆಗೂ ಪರಸ್ಪರ ಸಮ್ಮತಿಯಿಂದಾಗಿ ತಪ್ಪಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಗೋವಾ ಬಿಕ್ಕಟ್ಟಿನ ಪರಿಹಾರಕ್ಕೆ ಮಾತುಕತೆ
ಸೇನಾ ವೃತ್ತಿ ಇನ್ನಷ್ಟು ಆಕರ್ಷಣೀಯ: ಆಂಟೋನಿ
ಎನ್‌ಡಿಟಿವಿಯಲ್ಲಿ ದಾಂಧಲೆ: ಸಿಬ್ಬಂದಿಗೆ ಹಲ್ಲೆ
ಇನ್ನೊಬ್ಬ ಬೌದ್ಧ ಬಿಕ್ಕು ಆತ್ಮಹತ್ಯೆ
ಬೆಳೆಯುತ್ತಿರುವ ಭಾರತ ರತ್ನ ಪಟ್ಟಿ: ಭಗತ್ ಸೇರ್ಪಡೆ
ವಿಮಾನ ಅಪಹರಣ:ಜ.29ಕ್ಕೆ ತೀರ್ಪು