ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಸೋಮವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೇಲಿನ ಉಪಗ್ರಹ ಪೋಲಾರಿಸ್ ಉಡಾಯಿಸಿದೆ. ಪೋಲಾರ್ ಉಪಗ್ರಹ ಉಡಾವಣೆ ವಾಹಕದಿಂದ 350 ಕೇಜಿ ತೂಕದ ಉಪಗ್ರಹವನ್ನು ಇಸ್ರೊ ಉಡಾಯಿಸಿತು.ಪಿಎಸ್‌ಎಲ್‌ವಿ ವಿನ್ಯಾಸವು ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸುತ್ತಿರುವುದು ಇದು ಎರಡನೇ ಬಾರಿ.
ಕಳೆದ ಏಪ್ರಿಲ್ 2007ರಂದು ಪಿಎಸ್‌ಎಲ್‌ವಿ ಸಿ-8 ಇಟಲಿಯ ಉಪಗ್ರಹ ಅಜೈಲನ್ನು ಕಕ್ಷೆಯಲ್ಲಿ ಇರಿಸಿತ್ತು. ದೂರ ಸಂವೇದಿ ಉಪಗ್ರಹ ಪೋಲಾರಿಸ್ಸನ್ನು ಉಡಾವಣೆ ವಾಹಕಕ್ಕೆ ಒಂದು ವಾರದ ಹಿಂದೆ ಜೋಡಿಸಲಾಯಿತು. ಇಸ್ರೋ ಸೆಪ್ಟೆಂಬರ್ 2007ರಂದು ಉಪಗ್ರಹವನ್ನು ಉಡಾಯಿಸಬೇಕಿತ್ತು. ಆದರೆ ತರುವಾಯ ಅಕ್ಟೋಬರ್‌ಗೆ ಮುಂದೂಡಿತು. ಸಾಮಾನ್ಯ ವಿನ್ಯಾಸದಲ್ಲಿ ನಾಲ್ಕು ಹಂತಗಳ ಪಿಎಸ್‌ಎಲ್‌ವಿಯ ಪ್ರಥಮ ಹಂತದಲ್ಲಿ ಸ್ಟ್ರಾಪ್ ಆನ್ ಬೂಸ್ಟರ್‌ಗಳಿರುತ್ತದೆ.
295 ಟನ್ ಬಾರದ 44 ಮೀಟರ್ ಉದ್ದದ ಪಿಎಸ್‌ಎಲ್‌ವಿ 1200 ಕೇಜಿ ತೂಕದ ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸುವ ಸಾಮರ್ಥ್ಯ ಹೊಂದಿದೆ. ಕೋರ್ ಎಲೋನ್ ವಿನ್ಯಾಸದಲ್ಲಿ 6 ಸ್ಟ್ರಾಪ್ ಆನ್ ಬೂಸ್ಟರ್‌ಗಳನ್ನು ತೆಗೆದುಹಾಕಲಾಗುವುದು ಮತ್ತು ಮುಖ್ಯ ಪಿಎಸ್‌ಎಲ್‌ವಿ ತೆಳುವಾದ ವಾಹನದಂತೆ ಗೋಚರಿಸುವುದುಯ ಕೇವಲ 230 ಟನ್ ತೂಕದ ಇದು ಕಕ್ಷೆಯಲ್ಲಿ 600 ಕೇಜಿ ಉಪಗ್ರಹವನ್ನು ಇರಿಸಬಲ್ಲದು.
|