ಉಭಯ ರಾಷ್ಟ್ರಗಳ ಸಮೃದ್ಧಿಗೆ ಮತ್ತು ಉತ್ತಮ ವಿಶ್ವದ ನಿರ್ಮಾಣಕ್ಕಾಗಿ ಭಾರತ ಮತ್ತು ಬ್ರಿಟನ್ ಒಂದಾಗಿ ಕೆಲಸಮಾಡುವ ಅಗತ್ಯವನ್ನು ಬ್ರಿಟನ್ನಿನ ಪ್ರಧಾನಮಂತ್ರಿ ಗೋರ್ಡೋನ್ ಬ್ರೌನ್ ಪ್ರತಿಪಾದಿಸಿದರು.ಆಧುನಿಕ, ಆತ್ಮವಿಶ್ವಾಸದ 21ನೇ ಶತಮಾನದ ಭಾರತದ ಜತೆ ಸಮಾನ ಸಹಯೋಗವನ್ನು ಹೊಂದಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ವರದಿಗಾರರಿಗೆ ತಿಳಿಸಿದರು.
ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಸರ್ಕಾರಿ ಗೌರವವನ್ನು ಸ್ವೀಕರಿಸಿದ ಬಳಿಕ ವರದಿಗಾರರ ಜತೆ ಅವರು ಮಾತನಾಡುತ್ತಿದ್ದರು. ಭಾರತ ಮತ್ತು ಬ್ರಿಟನ್ ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಒಂದಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
ಹಳೆಯ ಪ್ರಜಾಪ್ರಭುತ್ವ ಮತ್ತು ದೊಡ್ಡ ಪ್ರಜಾಪ್ರಭುತ್ವ ಎರಡೂ ಬಲಿಷ್ಠ ಆರ್ಥಿಕತೆ ಮತ್ತು ಸಮಾಜದ ಸಮೃದ್ಧಿ ಹಾಗೂ ಉತ್ತಮ ವಿಶ್ವಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ನುಡಿದರು.
ಭಾರತಕ್ಕೆ ಹೆಚ್ಚಿನ ಪಾತ್ರ
ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಹೆಚ್ಚಿದ ಪರಿಣತಿಯಲ್ಲಿ ಬಿಂಬಿಸಲು ತಮ್ಮ ರಚನೆಯನ್ನು ನವೀಕರಿಸುವಂತೆ ಬ್ರೌನ್ ವಿಶ್ವ ಬ್ಯಾಂಕ್, ಐಎಂಎಫ್ ಮತ್ತು ಜಿ-8 ಕ್ಲಬ್‌ನ ಶ್ರೀಮಂತ ರಾಷ್ಟ್ರಗಳಿಗೆ ಕರೆ ನೀಡಿದರು. ಭಾರತ ಮತ್ತು ಬ್ರಿಟನ್ ಉದ್ಯಮಪತಿಗಳ ಭೋಜನಕೂಟದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನಮ್ಮ ಜಾಗತಿಕ ಸಂಸ್ಥೆಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದ ಅವರು ರಾಷ್ಟ್ರೀಯ ಬ್ಯಾಂಕುಗಳಿಗೆ ನೀಡಿದ ಮುಂಚಿನ ಸ್ವಾತಂತ್ರ್ಯವನ್ನು ಈಗಲೂ ನೀಡಬೇಕು ಎಂದು ಅವರು ನುಡಿದರು.
ಅಮೆರಿಕದಿಂದ ಆರ್ಥಿಕ ಹಿಂಜರಿತ ಹೊರಗೆ ಕೂಡ ವಿಸ್ತರಿಸಿರುವುದರ ನಡುವೆ, ವಿಶ್ವಬ್ಯಾಂಕ್ ಮತ್ತು ಐಎಂಎಫ್ ಇಂತಹ ಬಿಕ್ಕಟ್ಟನ್ನು ನಂತರ ಪರಿಹರಿಸುವ ಬದಲಿಗೆ ಈಗಲೇ ತಪ್ಪಿಸಬೇಕು ಎಂದು ನುಡಿದರು. ನಾವು ಜಾಗತಿಕ ಹಿಂಜರಿತ ನಿಭಾಯಿಸಲು ಹೊಸ ದಾರಿಗಳನ್ನು ಹುಡುಕಬೇಕು ಎಂದು ನುಡಿದ ಅವರು, ಜಾಗತಿಕ ಆರ್ಥಿಕತೆಗೆ ಭಾರತವು ಶಕ್ತಿಶಾಲಿ ಕೊಡುಗೆ ನೀಡಿದೆ ಎಂದು ಹೇಳಿದರು.
15 ವರ್ಷಗಳಲ್ಲಿ ನಿಮ್ಮ ರಾಷ್ಟ್ರೀಯ ಆದಾಯ ದುಪ್ಪಟ್ಟಾಗಿದೆ. ರಾಷ್ಟ್ರವು ನಾಲ್ಕನೇ ಅತೀ ದೊಡ್ಡ ಔಷಧಿ ಉತ್ಪಾದಕ ರಾಷ್ಟ್ರವಾಗಿದೆ ಮತ್ತು ವಿಶ್ವದಲ್ಲಿ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್ ಅಭಿವೃದ್ಧಿ ರಾಷ್ಟ್ರವಾಗಿದೆ ಎಂದು ಬ್ರೌನ್ ಶ್ಲಾಘಿಸಿದರು.
|