ಸ್ಫೋಟಕಗಳು, ಜೀವಂತ ಗುಂಡುಗಳು ಮತ್ತಿತರ ವಸ್ತುಗಳಿಂದ ಕೂಡಿದ ಚೀಲವೊಂದು ಸ್ಥಳೀಯ ರೈಲಿನಲ್ಲಿ ಅಜ್ಞಾತವಾಗಿ ಬಿಟ್ಟುಹೋಗಿರುವುದು ಪತ್ತೆಯಾಗಿದೆ. ಈ ರೈಲು ಶನಿವಾರ ಬೆಳಿಗ್ಗೆ ಚತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ ರೈಲಿನಲ್ಲಿದ್ದ ಪ್ರಯಾಣಿಕರು ವಾರಸುದಾರರಿಲ್ಲದ ಈ ಚೀಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ರೈಲು ಬೆಳಿಗ್ಗೆ 10.45ಕ್ಕೆ 3ನೇ ನಂಬರ್ ಪ್ಲಾಟ್‌ಫಾರಂಗೆ ಆಗಮಿಸುತ್ತಿದ್ದಂತೆ ಮಹಿಳೆಯರ ಬೋಗಿಯ ಹಿಂಭಾಗದಲ್ಲಿದ್ದ ಎರಡನೇ ದರ್ಜೆ ಸಾಮಾನ್ಯ ಬೋಗಿಯ ಪ್ರಯಾಣಿಕರು ಆಸನವೊಂದರಲ್ಲಿಟ್ಟಿದ್ದ ಚೀಲದ ಬಗ್ಗೆ ರೈಲ್ವೆ ಪೊಲೀಸರಿಗೆ ಎಚ್ಚರಿಸಿದರು.
ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಚೀಲವನ್ನು ಪರೀಕ್ಷಿಸಿದಾಗ ಎರಡು ನಾಡ ಪಿಸ್ತೂಲುಗಳು, 13 ಜೀವಂತ ಬಂದೂಕುಗಳು ಮತ್ತು ಸ್ಫೋಟಕ ತುಂಬಿದ್ದ ಪ್ಲಾಸ್ಟಿಕ್ ಚೀಲ ಪತ್ತೆಯಾಯಿತೆಂದು ಹಿರಿಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
|