ಉತ್ತರಭಾರತವು ತೀವ್ರ ಶೀತಗಾಳಿಯ ಪರಿಸ್ಥಿತಿಯಿಂದಾಗಿ ಮಂಗಳವಾರ ಬೆಳಿಗ್ಗೆ ತತ್ತರಿಸಿದೆ.ರಾಜಸ್ತಾನ, ಪಂಜಾಬ್ ಮತ್ತು ಹರ್ಯಾಣದಲ್ಲಿ ಹೆಪ್ಪುಗಟ್ಟಿದ ಚಳಿಯಿಂದ ತಲ್ಲಣಿಸಿದ್ದು, ದೆಹಲಿಯಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ ನಾಲ್ಕು ಡಿಗ್ರಿ ಕುಸಿತ ಅನುಭವಿಸಿದೆ. ಪಂಜಾಬಿನಲ್ಲಿ ಕನಿಷ್ಠ ಉಷ್ಣಾಂಶವಾದ ಸೊನ್ನೆ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹರ್ಯಾಣದಲ್ಲಿ ಕೂಡ ಶೀತಗಾಳಿಯು ಅಪ್ಪಳಿಸಿದ್ದು. ಉಷ್ಣಾಂಶವು ಸಾಮಾನ್ಯಕ್ಕಿಂತ ಕೆಳಗೆ ಒಂದು ಮತ್ತು ಐದು ಡಿಗ್ರಿ ನಡುವೆಯಿದೆ. ರಾಜಸ್ತಾನದ ಚುರು ಪ್ರದೇಶ ತೀವ್ರ ಹಿಮಗಾಳಿಯಿಂದ ತತ್ತರಿಸಿದ್ದು, ಕನಿಷ್ಠ ಉಷ್ಣಾಂಶವು ಮೈನಸ್ 2 ಡಿಗ್ರಿಗೆ ಕುಸಿದಿದೆ ಮತ್ತು ಪಿಲಾನಿಯಲ್ಲಿ ಉಷ್ಣಾಂಶ ಸೊನ್ನೆ ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.
ಶಿಮ್ಲಾದಲ್ಲಿ ಕನಿಷ್ಠ ಉಷ್ಣಾಂಶ -2.2 ಡಿಗ್ರಿ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಜಮ್ಮುಕಾಶ್ಮೀರ, ಹಿಮಾಚಲ ಮತ್ತು ಉತ್ತರಖಂಡದ ಕೆಲವು ಸ್ಥಳಗಳಲ್ಲಿ ಮಳೆ ಅಥವಾ ಹಿಮ ಬೀಳುವ ಲಕ್ಷಣಗಳು ಗೋಚರಿಸಿವೆ.
|