ಮಧ್ಯಪ್ರದೇಶದ ಪುರಿ ಬಳಿ ಬಸ್ಸೊಂದರಲ್ಲಿ ಬೆಂಕಿ ವ್ಯಾಪಿಸಿ ನಾಲ್ವರು ಅಸುನೀಗಿದ ಪ್ರಕರಣದಲ್ಲಿ 11 ವರ್ಷ ವಯಸ್ಸಿನ ಬಾಲಕನೊಬ್ಬ ಶೌರ್ಯದಿಂದ ಮೂವರು ಮಹಿಳೆಯರು ಮತ್ತು ಮಕ್ಕಳ ಜೀವವುಳಿಸದಿದ್ದರೆ ಸತ್ತವರ ಸಂಖ್ಯೆ ಇನ್ನೂ ಹೆಚ್ಚುತ್ತಿತ್ತು ಎಂದು ಹೇಳಲಾಗಿದೆ.
ಮೂರು ವಾರಗಳ ಯಾತ್ರೆ ಸಲುವಾಗಿ ಮಧ್ಯಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು 67 ಜನ ಪ್ರಯಾಣಿಕರನ್ನು ರಾಜಘಡದಿಂದ ಒಯ್ದಿತ್ತು. ಶನಿವಾರ ಸಂಜೆ ಪುರಿಯನ್ನು ತಲುಪಿದ ತಂಡವು ಜಗನ್ನಾಥ ಮಂದಿರಕ್ಕೆ ದರ್ಶನ ನೀಡಿ ಹಿಂತಿರುಗುವಾಗ ಪುರಿಗೆ 60 ಕಿಮೀ ದೂರದಲ್ಲಿ ದುರ್ಘಟನೆ ಸಂಭವಿಸಿದೆ.
ಬಸ್ಸಿಗೆ ಬೆಂಕಿ ಬಿದ್ದಾಗ 6ನೇ ತರಗತಿ ವಿದ್ಯಾರ್ಥಿ ಜಿಟ್ಮಲ್ ಸ್ಥಿತಪ್ರಜ್ಞನಂತಿದ್ದನು. ಬಸ್ಸಿನಲ್ಲಿ ಪ್ರತಿಯೊಬ್ಬರೂ ಕಿರುಚುತ್ತಿದ್ದರೆ ಕೂಡಲೇ ಏನಾದರೂ ಮಾಡದಿದ್ದರೆ ಎಲ್ಲರೂ ಸಾಯುವುದಾಗಿ ಅರಿತುಕೊಂಡೆ. ನನ್ನ ತಾಯಿಯನ್ನು ಬಸ್ಸಿನ ಕಿಟಕಿಯಿಂದ ಹೊರಗೆಳೆದೆ. ಇನ್ನಿತರರ ಕೂಗು ಕೇಳಿಸಿದಾಗ ಅವರನ್ನು ಕೂಡ ಹೊರಗೆಳೆದು ಜೀವವುಳಿಸಿದ್ದಾಗಿ ಬಾಲಕ ತಿಳಿಸಿದ.
|